ಸಂಗೀತ
ವಸಂತಕಾಲಕ್ಕೆ ಕೋಗಿಲೆ ದನಿಯಂತೆ
ಮಂಗಳ ಕಾರ್ಯಕ್ಕೆ ಮಂತ್ರದ ಸ್ವರದಂತೆ
ಅರಳುವ ಕುಸುಮಕ್ಕೆ ದುಂಬಿಯ ಮೊರೆಯಂತೆ
ವರ್ಷಕ್ಕೆ ಗುಡುಗು ಮಿಂಚಿನ ಸದ್ದಿನಂತೆ
ಸುಂದರ ಬಾಳಿಗೆ ಬೇಕು ಸುಮಧುರ ಸಂಗೇತ
ಚೈತನ್ಯ
ಚಿತ್ತಶುದ್ಧಿಯ ಹೊಂಬೆಳಕು, ಉನ್ಮಾದದ ಮನವು
ಚೈತನ್ಯದ ಕುದುರೆಗಳು
ಆ ಎರಡು ಅಶ್ವಾರೂಢವಾದರೆ ಸಾಕು
ಚೈತನ್ಯವ ಪ್ರಾಪ್ತಿಸಲು
ಉಲ್ ಮನಸಿನ ಚೈತನ್ಯದಿಂದ ಜೀವನದ
ಸೌರಭ ಹರಡುವುದು
ಅಲೆಗಳು
ಒಬ್ಬರ ಅನಿಸಿಕೆಗಳಿಗೆ ತಲೆಬಾಗದೆ
ಸದಾ ಉತ್ತೇಜನದಿಂ, ನಿರಾಟಂಕವಾಗಿ
ಛಂದೋಗತಿಯಲ್ಲಿ ಮಂಜುಳವಾದ
ಕೈಚಳಕವ ತೋರುವ
ಅಲೆಗಲ ಧೋರಣೆ ಎಷ್ಟು ಪ್ರಶಸ್ಥ!
ತೋರಣ
ಉದ್ಯಾನಗಳಲ್ಲಿ ಹಬ್ಬಿದ ಬಳ್ಳಿಗಳು
ಆಕರ್ಷಣ ಉಳ್ಳ ತಂಪಾದ ತೋರಣ
ಮುಂಜಾನೆ, ಮುಸ್ಸಂಜೆ ಹಾರುವ
ಹಕ್ಕಿಗಳ ಗುಂಪುಗಳಿಂದ
ಬಾನಲ್ಲಿ ತೋರಣ
ಎಲೆಗಳ ಮಧ್ಯದಿಂದ ಜಾರುವ
ಹೊಂಗಿರಣಗಳು ವನ್ಯಕ್ಕೆ ತೋರಣ
ಪ್ರಫುಲ್ಲತೆಯ ಶುಭಶಕುಣ
ತಾರತರವಾದ ತೋರಣ
ಆಯುಧ
ಮನೋಬಲವೇ ಆಯುಧ
ಬಾಳಿನಲ್ಲಿ ಜಯವನ್ನು ಸಾಧಿಸಲು
ಜೇನಿನಂತಾ ಮಾತೇ ಆಯುಧ
ಪ್ರೀತಿಯ ಸಂತಸ ಹರಡಲು
ಭಾವನೆಗಳೇ ಆಯುಧ
ತಂಪಾದ ಕವನಗಳು ಬರೆಯಲು
ಅಭಿವ್ಯಕ್ತವೇ ಆಯುಧ
ಒಲವಿನ ರಮ್ಯತೆ ರಂಜಿತವಾಗಲು
ಊಹೆ
ಊಹೆಗಳ ಕದಲಾಟ
ಕುಂಚದ ಸರಿದಾಟ
ಭಾವನೆಗಳ ಓಡಾಟ
ಲೇಖಿನಿಯ ನಲಿದಾಟ
ಕಾಲುಗಳ ತಕದಿಮಿತ
ನೃತ್ಯದ ಸರಿಹಿಡಿತ
ಹಾಡುಗಳ ಹರಿದಾಟ
ಕೋಗಿಲೆಯ ಇಂಪಾದ ಮಿಡಿತ
ಕಲೆಗಳ ಆಕರ್ಷಣ
ಹೃದಯಕ್ಕೆ ಚುಂಬನ
ಹಚ್ಚಿಕೊಂಡ ಕಲೆ
ಮನದ ಕಲಾನಿಪುಣ
ಜೀವನ
ಈ ಪ್ರಪಂಚವೇ ಒಂದು ರಂಗಮಂಚ
ಪಾತ್ರರು ನಾವೆಲ್ಲರೂ ನಟಿಸುತ್ತಾ ದಿನ ದಿನದ ಹಂತ
ಧರಿಸಬೇಕಾಗುತ್ತದೆ ಹಲವಾರು ವೇಷ ಭೂಷಗಳ
ಮಾಡಬೇಕಾಗಬಹುದು ಏಕಪಾತ್ರಾಭಿನಯಗಳ
ಹೆದರದೆ ಬೆದರದೆ ಅಭಿನಯಿಸು ನಿನ್ನ ಪಾತ್ರವನ್ನ
ಮನದಲ್ಲಿನ ಸಂತೃಪ್ತಿಯೇ ಸುಂದರ ಜೀವನ
ವಿಚಾರ ಮಾಡಬೇಡ ಕುಳಿತಿರುವನು
ಈ ಆಟದ ನಿರ್ದೇಶಕ
ನಂಬಿದರೇ ಆತನ
ನಾಟಕಕೆ ಸುಖಾಂತ
ಜೋರು ಚಪ್ಪಾಳೆಗಳಿಂದ
ಹಿಂಸಅಹಿಂಸ
ಸತ್ಚಿತ್ತದ ಅನುಷ್ಠಾನ
ನಿತ್ಯ ಅನುಪಮ
ಅಹಂಸೆಯ ಅಧಿಷ್ಠಾನ
ಸುಭೀಕ್ಷೆಯ ಸುಗಮ
ಸುನಂದದ ಸುಗುಣವೇ
ಸುಂದರ ಸಂಸಾರಕ್ಕೆ ಸಂಜೀವನ!
ಅತಿ ಆಸೆಯ ಅಂಧಕಾರ
ಹಿಂಸಕ್ಕೆ ದಾರಿ ತೆಗೆಯುವ ಪ್ರತೀಕಾರ
ಕಲಿಕಾಲದ ಪ್ರಗಲ್ಭ ಪ್ರಲೋಭ!
ಲೋಕ
ಆಧುನಿಕ ಕಾಲದ ವಿಪರೀತ ಬುದ್ಧಿ
ಪ್ರಾಣದ ಬೆಲೆಗಿಂತ ವಸ್ತುಗಳಿಗೆ ಬೆಲೆ ಕೊಡುವ ಲೋಕ
ಮಾನವೀಯತೆಗೆ ಬರುತ್ತಿಹ ಬರೆ
ಎಲ್ಲಿಗೆ ಕೊಂಡೊಯ್ಯುವುದೋ ಆ ದೇವರೇ ಬಲ್ಲ!
ಸಂಪ್ರದಾಯ
ಸಾಂಪ್ರದಾಯಗಳೇ ಚನ್ನ
ನಸುನಗುತಾ ಹುಮ್ಮಸ್ಸಿನಿಂದ
ಹುಯಿಲೆಬ್ಬಿಸುತಾ ಸಂಭ್ರಮಾನಂದದಿ
ಒಂದೊಂದು ಹಬ್ಬಕ್ಕು
ಒಂದೊಂದು ರೀತಿಯಾದ
ಋತಗಳಿಗೆ ತಕ್ಕ ಆಚರಣೆಗಳನ್ನು ಮಾಡುವೆವು
ಹಬ್ಬಗಳ ಮಹತ್ವ ಸಾರ್ವಜನಿಕ ಆರೋಗ್ಯ, ಸಂಪತ್ತುಗಳನ್ನು ಕಾಪಾಡಿಕೊಳ್ಳಲು ಉಪಯೋಗಕರ
ಸಂಭ್ರಮದಿಂದ ಕೊಂಡಾಡುವ ಉತ್ಸಾಹ!
ದೀವಿಗೆ
ಮನೆಯಲ್ಲಿ ದೀವಿಗೆ ಬೆಳಗಲು
ಮನ ತುಂಬುವ ಪ್ರೀತಿಯೇ ಪ್ರಣತಿ
ನಮ್ಮ ಜ್ಞಾನದ ವೈಭವ ಬೆಳಗಲು
ಹಿರಿಯರ ಪ್ರವಚನಗಳೇ ಹಣತೆ
ಆ ದೈವನನ್ನು ಆರಾಧಿಸಲು
ಬೆಳಗೋಣ ನಿತ್ಯ ದಿವ್ಯ ಜ್ಯೋತಿ
ನಯನ
ಅಭಿವ್ಯಕ್ತಗಳ ಸಂಪದ ನಯನ
ಅಭಿಜ್ಝ್ನತ್ಯಯ ತಳಕು ನಯನ
ಅಭಿಜಾತ ಅಪರ್ಣೆ ನಯನ
ಅಭಿಮಾನದ ಪಾರದರ್ಶಕ ನಯನ
ಅಭಿನಯಕ್ಕೆ ಮೂಲಭಾವ ನಯನ
ತಪಸ್ಸು
ಕಲಿಯುಗದಲ್ಲಿ ಮಾಡಬೇಕಿಲ್ಲ ದೀಕ್ಷ ತಪಸ್ಸು
ಸತ್ಯ, ಧರ್ಮ, ನಿಷ್ಟೆ, ನೀತಿ ನಿಯಮಗಳನ್ನು
ಪ್ರಾಮಾಣಿಕವಾಗಿ ನಿರ್ವರ್ತಿಸುವುದೇ ತಪಸ್ಸು
ಆ ದೇವರು ಮೆಚ್ಚುವ ತೇಜಸ್ಸು
ಜೀವನ
ಪ್ರೀತಿಯ ಚಿಲುಮೆ
ಗೆಳೆತನದ ಒಲುಮೆ
ಪರಂಪರೆಯ ಹಿರಿಮೆ
ಆಸೆಗಳ ಶಮೆ
ನಸುನಗೆಯ ಧಾರಣೆ
ಸೋಲಿನ ಶೂಲೆ
ಇವೆಲ್ಲಾ ಜೀವನದಲ್ಲಿ ಮದ್ದಾಳೆಗಳು
ಅರಿತು ಸುಸಂಸ್ಕೃತರಾಗಬೇಕಾದ್ದು
ನಮ್ಮ ತೀಕ್ಷ್ಣತೆ!
ಕಾಳಿದಾಸ
ತಮ ತುಂಬಿದ ಕಾಳಿದಾಸನ ನಾಲಿಗೆ ಮಾಡಿದ ಪುಣ್ಯವೋ
ಅಥವಾ ಆತನ ಹೆಂಡತಿಯ ವಿವೇಕ ಮತ್ತು ಭಕ್ತಿಯ ಫಲವೋ
ಆದರೆ ಜಗವೇ ಉದ್ಧಾರವಾಗುವಂತ
ಕವನಗಳು ರಚಿಸಿದ,
ಕಾಳಿಕಾದೇವಿಯ ಅತ್ಯುತ್ತಮ ಭಕ್ತನಾಗಿ
ಕವಿರತ್ನನಾದ!
ಪ್ರಕೃತಿ
ಮನ ದನಿಯಲಾರದು
ನೋಡುವಾಗ!
ಕಂದನ ನಗುವು
ಹೂವಿನ ಚೆಲುವು
ಬಾನಿನ ಸೊಬಗು
ನೀರಿನಲ್ಲಿ ಚಂದ್ರನ ಬಿಂಬವು
ನವಿಲಿನ ನಾಟ್ಯವು
ಎಲೆಯಮೇಲೆ ಹಿಮಬಿಂದು
ಸಮುದ್ರದ ಗಂಭೀರ
ನೀರಿನ ಜಲಪಾತ
ಪ್ರಕೃತಿಯ ಚಂದ
ಉತ್ಸಾಹ ಹಾಗು ಆನಂದ
ದೀಪಾವಳಿ
ನರಕಾಸುರನ ವಧೆ ಅಂದರೆ ನಮ್ಮೊಳಗಿನ ರಾಕ್ಷಸ ಗಣದ ಸಂಹಾರ...ನಾವು ನಮ್ಮೊಳಗಿನ ದಾನವರನ್ನು ವಧೆಮಾಡಿ ಜ್ಞಾನ ಮಾರ್ಗದಲ್ಲಿ ದೀಪದ ಕಾಂತಿ ಚಿಮ್ಮುತ್ತಾ ಸುಷ್ಮಾತ್ಮಕವಾಗಿ ಹಬ್ಬ ಆಚರಿಸೋಣ
ಅಮಾವಾಸ್ಯದ ಚತುರ್ದಶಿಯಂದು ಸುತ್ತಲೂ ಇರುವ ಕತ್ತಲನ್ನು ದೂರ ಮಾಡಿ, ದೀಪಗಳು ಬೆಳಗಿ ಪ್ರಕಾಶ ತರುವ ಸಂಭ್ರಮವೇ ದೀಪಾವಳಿಯ ಮಹತ್ವ
ದೀಪಾವಳಿ
ದೀಪಾವಳಿ ಹಬ್ಬದ ಗದ್ದಲ,
ಹರುಷ ತುಂಬಿದ ನಮ್ಮ ಸದನ
ಪಟಾಕಿಯ ಸಪ್ಪಳ,
ಈ ಹಬ್ಬದ ವೈಶಿಷ್ಟ್ಯದ ನಂದನ
ಭೋಗ ಭಕ್ಷಗಳ ರುಚಿ,
ನಮ್ಮ ನಾಲಿಗೆಗೆ ಬಲು ಆಸಕ್ತಕರ
ಎಲ್ಲರೂ ಆನಂದದಿಂದ
ಸಡಗರದಿಂದ ಹೊಸಾ ಬಟ್ಟೆ ಧರಿಸಿ
ಸಂತುಷ್ಟರಾಗೋಣ
ಈ ಸಂತೋಷದ ಚಮತ್ಕಾರ
ವರುಷ ಪೂರ್ತಿ ತರಬೇಕು
ನಮಗೆ ಸ್ಪೂರ್ತಿಯನ್ನ
ಬೆಳಕು
ತಾಯಿ ಕೊಡುವಳು ಮಮತೆಯ ಬೆಳಕು
ತಂದೆ ಕೊಡುವನು ವಿಶ್ವಾಸದ ಬೆಳಕು
ಸೋದರ ತೋರುವನು ರಕ್ಷಣೆಯ ಬೆಳಕು
ಸೋದರಿ ತೋರುವಳು ಅನುರಾಗದ ಬೆಳಕು
ಮಿತ್ರರು ತೋರುವುದು ಆತ್ಮೀಯತೆಯ ಬೆಳಕು
ಬಂಧುಗಳು ತೋರುವುದು ನಂಟಿನ ಬೆಳಕು
ಗುರುಗಳು ತೋರುವುದು ಜ್ಞಾನದ ಬೆಳಕು
ಹುರಿದುಂಬಿದ ಬೆಳಕು,
ಮನೋ ವಿಕಾಸಕ್ಕೆ ಸೊಬಗು
ಬೆಳಕಿನ ಚಳಕ ಜೀವನದ ತಳಕು
Comments