ಅಮಾಯಕರಿಗಿದೆ ಆಪತ್ತು (ಕಥೆ)
ಪೋಲೀಸರು ಎಷ್ಟು ಕೇಳಿದರೂ ಅವನು ಬಾಯಿ ತೆಗಿಯಲೇ ಇಲ್ಲ. ಅವರು ಕೇಳುವುದು ಅವನಿಗೆ ಅರ್ಥವಾಗಲೇ ಇಲ್ಲ. ಹೊಸ ಭಾಷೆ ಇತ್ತು ಅವರದ್ದು. ಕೊನೆಗೆ ಇವನ ಮಾತೃ ಭಾಷೆಯಲ್ಲಿ ಏತಕ್ಕೆ ನನ್ನನ್ನು ಸೆರೆ ಮಾಡಿರುವಿರೆಂದ. ಅಲ್ಲಿದ ಒಬ್ಬ ಅವನ ಮಾತನ್ನು ಅನುವಾದ ಮಾಡಿದಮೇಲೆ ಇನ್ನಷ್ಟು ಹೊಡೆತ ಆರಂಭಿಸಿದರು. ಏನೇ ಆಗಲಿ ಗುಟ್ಟು ಹೊರತೆಗೆಯುತ್ತೇವೆಂದು ನಿಶ್ಚಯಿಸಿದ ಪೋಲೀಸರು ರಾತ್ರಿ ಹಗಲು ಅನೇಕ ಹಿಂಸೆ ಕೊಟ್ಟರು. ರಕ್ತದಲ್ಲಿ ತೊಯ್ದಿದ್ದ ಸುಭಾಷ.
ರಾತ್ರಿ ಹೊತ್ತಿನಲ್ಲಿ ಸೀಮೆ ತಿಳಿಯದೆ ಸಮುದ್ರದಲ್ಲಿ ಹೊರ ದೇಶದಕಡೆ ಒಂದೆರಡು ಮೈಲು ನುಗ್ಗಿಬಿಟ್ಟ ಮೀನುಗಾರನನ್ನು ಗುಪ್ತಚರನೆಂದು, ತಮ್ಮ ದೇಶದ ಗೌಪ್ತ್ಯಗಳನು ಅಲ್ಲಿ ಇರುವ ನಮ್ಮ ನೌಕಾ ಪಡೆಗೆ ವಿಷಯ ಸೂಚಿಸುವ ಕೆಲಸ ಸುಭಾಷಂದೆಂದು ತಿಳಿದು ಬಗಲ್ದೇಶದ ಪೋಲೀಸರು ಅವನನ್ನು ಹಿಡಿದರು.
ಇಲ್ಲಿ ಮನೆ ಹತ್ತಿರ ವಯಸಾದ ತಂದೇತಾಯಿ ಮಗ ೩ ದಿನಗಳ ಮುಂದೆ ಹೋದವನು ಬರಲಿಲ್ಲವೆಂದು ತೀರದ ಹತ್ತಿರ ಹೋಗಿ ಅವನ ಸ್ನೇಹಿತರನ್ನು ಕೇಳುತ್ತಿದ್ದರು. ಕೊನೆಗೆ ಒಬ್ಬ ಸುಭಾಷನ ಜೊತೆ ಬೇರೇ ನೌಕದಲ್ಲಿ ಹೋದವನನ್ನು ಕೇಳಿದರು. ಅವನ ನೌಕೆ ಸುಭಾಷನಿಗಿಂತ ಸ್ವಲ್ಪ ಹಿಂದೆ ಇತ್ತು. ಆಗ ತಾನು ನೋಡಿದ ವಿಷಯವನ್ನೆಲ್ಲ ಹೇಳಿದ.
ತಂದೇತಾಯಿ ಬೇಗ ಆ ಊರಿನಲ್ಲಿದ್ದ ಹಿರಿಯರಾದ ಮನೋಜ ಸಿಂಗ್ ಅವರನ್ನು ಭೇಟಿ ಮಾಡಿ ವಿಷಯ ಹೇಳಿದರು. ಮನೋಜ ಸಿಂಗ್ರವರು ನೌಕಾ ಪಡೆಯಲ್ಲಿ ಕೆಲಸ ಮಾಡಿ ಆ ವರ್ಷನೇ ಆ ಹಳ್ಳಿಗೆ ವರ್ಗಾವಣೆಯಾಗಿದ್ದರು. ಅವರಿಗೆ ಇವರಿಗೆ ದೂರವಾಣಿ ಕರೆ ಮಾಡಿ ಸುಭಾಷ ಮೀನುಗಾರ ಮಾತ್ರವೆಂದು ಬಗಲ್ದೇಶಕ್ಕೆ ತಂತಿ ಸಂದೇಶ ಕಳುಹಿಸಿದರು. ಸೀಮೆಯಲ್ಲಿದ್ದ ನೌಕಾ ಪಡಿಯವರು ಸುಭಾಷನನ್ನು ಅವನ ಊರಿಗೆ ಕರೆದುಕೊಂಡು ಬಂದು ಬಿಟ್ಟರು..
ಏಷ್ಟೋ ಜನ ಅಮಾಯಕ ಮೀನುಗಾರರು ಈ ರೀತಿ ತಿಳಿಯದೆ ಸೀಮೆ ದಾಟಿ ಮತ್ತೆ ತಮ್ಮ ದೇಶಕ್ಕೆ ತಿರುಗಿ ಬರಲು ಆಗದೇ ನೋವನ್ನು ಅನುಭವಿಸುತ್ತಿದ್ದಾರೋ ಪಾಪ.. ಎಲ್ಲರಿಗು ಸುಭಾಷನಿಗೆ ಇದ್ದ ಅದೃಷ್ಟ ಇರೋದಿಲ್ಲವಲ್ಲ. ಈ ತರಹದ ಮೀನುಗಾರರಿಗೆ ಚೇತಾವನಿಯನ್ನು ಕೊಡಬೇಕು ಮತ್ತು ತರಬೇತು ಮಾಡಬೇಕು.
ತಿಳುವಳಿಕೆ (ಕಥೆ)
ಇಡೀ ರಸ್ತೆಯೇ ಹೂವಿಂದ ಅಲಂಕೃತಗೊಂಡಿತ್ತು. ಹೊವಿನ ಪರಿಮಳ ಹರಡುತ್ತಿತ್ತು. ಫ್ಲವರ್ ಷೋ ಅಂತೆ ಇವತ್ತು ನಾಳೇ ಲಾಲಭಾಗಿನಲ್ಲಿ ಎಂದು ಉತ್ಸಾಹದಿಂ ಹೇಳಿದಳು ಲತ. ಆಗ ತಂದೆ ಹೇಳಿದರು ಎಲ್ಲವು ನೇರ ಪ್ರಸಾರ ಇದೆಯಂತೆ ದೂರದರ್ಶನ ಛಾನಲ್ನಲ್ಲಿ.. ನಾನು ನೇರವಾಗಿ ಹೋಗಿ ನೋಡಬೇಕೆಂದು ಲತಳು ಹಟ ಹಿಡಿದಳು. ಆಗ ತಂದೆ ಈಗಿನ ದೇಶದ ಪರಿಸ್ಥಿತಿಯನು ವಿವರಿಸಿ ಏತಕೆ ಶಾಲೆ ಕಛೇರಿ ಸಹ ಮನೆಯಿಂದ ನಡೆಯುತ್ತಿದೆ ಯಂದು ಅರ್ಥಮಾಡಿಸಿದನು. ಹರಡಿತ್ತಿರುವ ರೋಗದ ತೀವ್ರತೆಯನು ಕಡಮೆಮಾಡುವ ಸರಕಾರದ ಯತ್ನದಲಿ ದೇಶದ ನಾಗರಿಕರಾಗಿ ನಮ್ಮ ಕರ್ತವ್ಯವೂ ಇದೇಯಂದು ಹೇಳುತ್ತಾ ಹಾಗೇ ಪ್ರಜೆಗಳು ಸಹಕರಿಸದಿದ್ದಲ್ಲಿ ನಾಯಕನೊಬ್ಬನು ಏನು ಮಾಡಲು ಸಾಧ್ಯವಾಗದೆಂದು ವಿವರವಾಗಿ ಮಗಳಿಗೆ ತಿಳಿಸಿದನು. ಪರಿಸ್ಥಿತಿಯನು ಅರಿತು, ದೇಶದ ಭಾವಿ ಪ್ರಜೆಯಾಗಿ ತಾನು ಮಾಡಬೇಕಾದ ಕರ್ತವ್ಯವನು ಮಾಡಿ ದೂರದರ್ಶನದ ನೇರ ಪ್ರಸಾರವನು ಸಂಪೂರ್ಣವಾಗಿ ಆನಂದಿಸಿದಳು ಲತಳು.
_ರೂಪ ರಾಣಿ ಬುಸ್ಸ
ಸಹಜ ಗುಣ (ಕಥೆ)
ದೇವಸ್ಥಾನದ ಮುಂದಿದ್ದ ಪಾದರಕ್ಷೆಯ ಸಾಲುಗಳು ಖಾಲೀಯಾಗಿ ಬಿದ್ದಿದ್ದವು ಆದರೆ ಧ್ವಜಸ್ತಂಭದ
ಎಡಗಡೇ ಬಲಗಡೇ ನೂರಾರು ಜೊತೆಗಳು ಚಿಕ್ಕ ಚಿಕ್ಕ ಗುಡ್ಡಗಳಾಗಿ ಬಿದ್ದಿದ್ದವು. ಹಾಗು ದೇವಸ್ಥಾನದ ಸುತ್ತಲೂ ಅಲ್ಲಿ ಇಲ್ಲಿ ಬಿದ್ದಿದ್ದವು. ಪಾದರಕ್ಷೆ ಇಲ್ಲಿ ಬಿಡಿರೆಂದು ಸಾಲುಗಳನ್ನು ತೋರುತ್ತಾ ನಿಂತಿದ್ದನು ರಾಮಪ್ಪ.. ಬಡವನಿದ್ದರು ಅಲ್ಲಿ ಅವರಿವರು ಪಾದರಕ್ಷೆಗಳನು ಕಾಯುವುದುಕ್ಕೆ ಕೊಡುವ ಚಿಲ್ಲರ ಕಾಸನ್ನು ಆತನು ಹುಂಡಿಗೆ ಹಾಕುತಿದ್ದ...
ಒಮ್ಮೆ ಪುರೋಹಿತರು ರಾಮಪ್ಪನನ್ನು ಕೇಳಿದರು, ಅಲ್ಲ ರಾಮಪ್ಪ! ನಿನ್ನ ಜೀತ ಬಹಳ ಕಡಿಮೆ ಮತ್ತೆ ಬೇರೇ ಆದಾಯ ನನಗೆ ತಿಳಿದಂತೆ ಏನು ಇಲ್ಲ.. ಜನಗಳು ಕೂಡ ಕೆಲವರೇ ಪಾದರಕ್ಷೆಗಳ ಸಾಲಿನಲ್ಲಿ ಬಿಡುತ್ತಾರೆ ಮತ್ತೇ ಅದರಲ್ಲು ಸ್ವಲ್ಪ ಜನ ಮಾತ್ರ ಮೆಚ್ಚಿ ಕೊಡುವ ಕಾಸು ನೀನು ಹುಂಡಿಗೆ ಹಾಕುತ್ತೀಯ, ಸ್ವಲ್ಪ ಹಣವಿದ್ದರೇ ನಿನ್ನ ಮನೆಗೆ ಉಪಯೋಗವಾಗುವುದಲ್ಲವೇ ಯಂದು...
ಸ್ವಾಮಿ! ನಾನು ಮಾಡುವ ಕೆಲಸಕ್ಕೆ ಜೀತ ತೆಗೆದುಕೊಳ್ಳುತ್ತಿದ್ದೇನೆ. ನಿತ್ಯ ಪ್ರಸಾದದ ರೂಪದಲಿ ಭಗವಂತ ನನಗೆ ಊಟದ ವ್ಯವಸ್ಥೆ ಮಾಡಿದ್ದಾನೆ...
ಕೆಲವರು ಕಾಸು ಕೊಡುವುದೇತಕೆಂದು ಬೇರೇ ಕಡೆನೋ ಧ್ವಜಸ್ತಂಭದ ಪ್ರಾಂಗಣದಲ್ಲಿಯೋ ಪಾದರಕ್ಷೆಗಳನ್ನು ಬಿಟ್ಟು ನನಗೆ ಕೆಲಸ ಮಾಡಲು ಅವಕಾಶ ಕೊಡುತ್ತಿಲ್ಲ.. ಮತ್ತು ಕೆಲವರು ಸಾಲಿನಲ್ಲಿ ಪಾದರಕ್ಷೆ ಬಿಟ್ಟು ತಿರಿಗಿ ಹೋಗುವಾಗ ಚಿಲ್ಲರೆ ಕೈಯಲ್ಲಿ ಕೊಡುತ್ತಾರೆ. ನನ್ನ ಜೀತದಲ್ಲಿ ಎರಡು ತರಹ ಜನರ ಪಾದರಕ್ಷೆಯು ಸೇರಿದೆ. ಮಾಡಿದ ಕೆಲಸಕ್ಕೆ ಜೀತ ಹೇಗೂ ಬರುತ್ತಿದೆ. ನಾನು ಕಾಯದ ಪಾದರಕ್ಷೆಗೆ ಪಡೆದ ಜೀತಕ್ಕೆ ಬದಲಾಗಿ ಮೇಲಾದಾಯವಾಗಿ ಸಿಗುವ ಈ ಕಾಸನ್ನು ಆ ದೇವರಿಗೆ ಅರ್ಪಿಸುವೆನು. ಮಾಡದ ಕೆಲಸಕ್ಕೆ ಜೀತ ತೊಗೊಳುತ್ತಿಲ್ಲವೆಂಬೋ ಸಮಾಧಾನ ನನ್ನ ಮನಸಿಗೆ ಅಷ್ಟೆ ಸ್ವಾಮಿ ಯಂದು ಹೇಳಿದನು ರಾಮಪ್ಪ...
ರಾಮಪ್ಪನ ಮಾತು ಕೇಳಿ ಪುರೋಹಿತರು ಈ ರೀತಿ ತಿಳಿದರು
ಪ್ರಾಮಾಣಿಕತೆಗು ಬಡತನಕ್ಕು ಸಂಬಂಧವಿಲ್ಲ...
ಅವರವರ ಸಹಜ ಗುಣ ಅಷ್ಟೆ.. ಈ ರಾಮಪ್ಪನಂತೆ
ಬಡವರಾದರು ನಿಯತ್ತಾಗಿರುವರು ಬಹಳಷ್ಟು ಮಂದಿ ಇದ್ದಾರೆ... ಸರಿವಂತರಿದ್ದರು ನಿಯತ್ತಿಲ್ಲದಿರುವವರು ಅನೇಕರಿದ್ದಾರೆ ಈ ಜಗದೊಳು...
ಕೃಷ್ಣಂ ವಂದೇ ಜಗದ್ಗುರುಮ್
ದೇವರು ಒಳ್ಳೇಯದು ಮಾಡಲಿ ರಾಮಪ್ಪ ಬರ್ತಿನಿ ನಾಳೇ ಸಿಗೋಣವೆಂದು ಹೇಳುತ್ತಾ ಪುರೋಹಿತರು ಮನೆಗೆ ಹೊರಟರು.
_ರೂಪ ರಾಣಿ ಬುಸ್ಸ
ಹಕ್ಕಿಯಿಂದ ಕಲೆತ ಪಾಠ (ಕಥೆ)
ಹಕ್ಕಿ ಒಂದು ಕಿಟಕಿಯಲಿ ಗೂಡು ಮಾಡಿತ್ತು.. ಪುಟ್ಟ ಪುಟ್ಟ ವಾದ ೬ ಮರಿಗಳಿದ್ದವು ಕಿಚ್ ಕಿಚ್ ಎನ್ನುತ್ತ ಅಮ್ಮ ತಂದು ಕೊಟ್ಟ ಧಾನ್ಯಗಳನ್ನು ತಿನ್ನುತ್ತಿತ್ತು.. ಎಳೇ ಹಕ್ಕಿಗಳಿಗೆ ರೆಕ್ಕೆ ಕೂಡ ಸರಿಯಾಗಿ ಬಂದಿಲ್ಲ. ತಾಯಿ ಬರುವಳೆಂದು ದಾರಿ ಕಾಯುತ್ತ ಚಿಕ್ಕ ಗೂಡಿನಲ್ಲಿ ಸದಾ ಸದ್ದು ಮಾಡುತ್ತಾ ಕುಳಿತಿದ್ದವು...
ಅನಿಲ ಇದನ್ನೇ ನೋಡುತ್ತ ಆಹಾ ಎಂತಹ ಸುಖ ಜೀವಿಗಳು.. ಹಕ್ಕಿ ಆದರು ಆಗ ಬಹುದಿತ್ತೇನೋ ಈ ಮಾನವನ ಜೀವನದಲ್ಲಿ ಸದಾ ಯಾವುದಾದರು ಸಮಸ್ಯೆಗಳು ಬರುತ್ತಾ ಇರುತ್ತವೆ. ಸಾಲದಕ್ಕೆ ಸುತ್ತುಮುತ್ತು ಜನ ಬೇರೆ ಸ್ನೇಹಿತರೋ ಶತ್ರುಗಳೋ ತಿಳಿಯದ ಗೌಪ್ತ ಯಂದು ತನ್ನೊಳಗೆ ತಿಳಿಯುತ್ತಿದ್ದ. ಕ್ಷಣ ಮಾತ್ರಾಂತರದಲಿ ತಂದೆ ತಾಯಿ ಇಲ್ಲದ ಗೂಡಿಗೆ ಗಿಡುಗ ಎಲ್ಲಿಂದಲೋ ಹಾರಿಬಂದು ಕಿಟಕಿ ಪಕ್ಕದಲ್ಲಿರುವ ಮರದ ಕೊಂಬಲಿ ಕುಳಿತು ಹಕ್ಕಿಯ ಮರಿಗಳನು ತಿನ್ನುವ ಹೆಂಚು ಹಾಕುತ್ತಿತ್ತು. ಪ್ರಾಣ ಭಯ ನೋಡಿ ಹಕ್ಕಿಗಳು ಎಳೇವಾಗಿದ್ದರು ಸೂಕ್ಷ್ಮ ತಿಳಿದು ಗೂಡಿನಲ್ಲಿ ಇರುವ ಹುಲ್ಲಿನ ಒಳಗೆ ಸೇರಿಕೊಂಡವು. ಬಹಳ ಸಮಯದ ವರೆಗು ಗಿಡುಗು ಪ್ರಯತ್ನಿಸುತ್ತಲೇ ಇತ್ತು. ಎರಡು ಬಾರಿ ಅನಿಲನು ಸಹ ಅದನನ್ನು ಓಡಿಸಿದ ಆದರೆ ಸರ್ವ ಸದಾ ಕಾಲ ಅನಿಲನಿಗೆ ಅದನನ್ನು ಕಾಯಲು ಸಾಧ್ಯವಾಗಲಿಲ್ಲ. ಮರಿಗಳು ಹೊರಾಡಿ ತಮ್ಮ ಪ್ರಾಣ ರಕ್ಷಣೆ ಮಾಡಿಕೊಂಡವು. ಒಂದು ಗಿಡುಗ ಮಾತ್ರವಲ್ಲ ಗೂಬೆಗಳ ಹಾವುಗಳ ಭಯ ಮರಿಗಳಿಗೆ ಇದ್ದೇ ಇದ್ದದ್ದು ಕಂಡು ಅನಿಲನಿಗೆ ಅನಿಸಿತು ಜೀವನ ಅಂತ ಇದ್ದರೇ ಹೋರಾಡಲೇಬೇಕು ಗುಬ್ಬೆಯಾಗಲಿ ಮನುಷ್ಯನಾಗಲಿ. ದೂರದ ಬೆಟ್ಟ ನುಣ್ಣಗೆ ಅನ್ನುವ ಹಾಗೆ ಮತ್ತೊಬ್ಬರ ಜೀವನ ಸುಖವಾಗಿ ನಮ್ಮ ಸ್ಥಳದಿಂದ ತಿಳಿಯುತ್ತದೆ. ಹತ್ತಿರ ಹೋಗಿ ನೋಡಿದಾಗ ಎಲ್ಲ ಪ್ರಾಣಿಗಳೂ ಅದರದರ ಸ್ಥಿತಿಗತಿಗಳಿಗೆ ತಕ್ಕಂತೆ ಹೋರಾಟವು ಸಾಗಿಸಲೇ ಬೇಕೆಂಬುದು ತಿಳಿದು ಬರುತ್ತದೆ ಯಂದು ನೆನೆದ. ಜೀವನದಲಿ ಅತಿ ಮುಖ್ಯ ಪಾಠವ ಅರಿತ ಅನಿಲ
ಅಂದಿನಿಂದ ವ್ಯರ್ಥ ಚಿಂತನೆ ಮಾಡದೆ ಅನಿಲನು ಏನೇ ಬರಲಿ ಧೈರ್ಯದಿಂ ಎದುರಿಸಲು ತನ್ನದಾದ ಪ್ರಯತ್ನವನು ಮಾಡ ತೊಡಗಿದ.
ಮಿತಿಮೀರಿದಾಂಗಿರಲಿ! (ಕಥೆ)
ಸುರೇಶ ಟೀ ಕಪ್ ಹಿಡಿದು ಪಡಸಾಲೆಯಲಿ ಕುಳಿತಿದ್ದ. ದೂರದರ್ಶನದಲ್ಲಿ ಅದೆಷ್ಟು ನ್ಯೂಸ್ ಛಾನಲ್ಗಳು ಇತ್ತೀಚೆಗೆ. ಭಾರಿ ಶಬ್ದ ಮಾಡುತ್ತಾ ಕೂಗಾಡುತ್ತಾ ಫ್ಲಾಷ್ ನ್ಯೂಸ್ ಎನ್ನುವ ಹೆಸರಿನಲ್ಲಿ ಬಲು ಅಟಾಟೋಪ ಮಾಡುತ್ತಾರೆ. ಕಳೆದ ಕಾಲದಲ್ಲಿ ನೆಮ್ಮದಿಯಾಗಿ ಇತ್ತು ದಿನಕ್ಕೆ ಎರಡು ಬಾರಿ ಮಾತ್ರ ವಾರ್ತೆಗೊಳು ಬರುತ್ತಿತ್ತೆಂದು ಹೆಂಡತಿ ದೀಪಳಿಗೆ ಹೇಳಿದ..
ಹೌದು ಮತ್ತೆ ನೋಡುವವರು ನಿಮ್ಮಂತಾವರು ಇದ್ದಾಗ ಅವರು ಪ್ರಸಾರ ಮಾಡುತ್ತಾರೆ. ಟಿ ಆರ್ ಪಿ ಗಳಿಸಿ ಛಾನಲ್ಗಳ ವೃದ್ಧಿಯಾಗುತ್ತವೆ ಹಾಗು ಮತ್ತಷ್ಟು ಛಾನಲ್ಗಳ ಬೆಳೆಯುತ್ತಲೇ ಹೋಗುತ್ತವೆ ಅಷ್ಟೇ ಅಂದಳು ದೀಪ...
ಮತ್ತೆ ಇದಕ್ಕೇನು ಉಪಾಯ? ದಿನದಿನಕ್ಕೂ ಮಿತಿ ಮೀರಿ ಹೋಗುವುದು ಕಂಡರೆ ಒಂದು ತರಹಾ ಚಿಂತೆ ಯಾಗುತ್ತದೆ ಅಂತ ಕೇಳಿದ ಸುರೇಶ.
ಅದೇ ಯಕ್ಷ ಪ್ರಶ್ನೆಯಾಗಿ ಉಳುದಿದೆ! ಎಲ್ಲರಿಗು ಅತಿ ಶೀಘ್ರದಲಿ ಹೇಗಾದರೂ ಹಣ ಹಾಗು ಖ್ಯಾತಿ ಸಂಪಾದಿಸುವ ಇಚ್ಛೆ. ಇಚ್ಛೆ ತಪ್ಪಲ್ಲ ಆದರೆ ಸುತ್ತಲೂ ಪರಿಸರಗಳನು ಕಾಲುಷ್ಯಗೊಳಿಸಿ ತಮ್ಮ ಉದ್ಧಾರವನು ಮಾತ್ರ ನೋಡಿಕೊಳ್ಳುವ ಸ್ವಾರ್ಥ ಮನುಷ್ಯರಿಂದ ದೂರ ಆದಾಗಲೇ ಸಮಾಜ, ದೇಶದ ಸುಧಾರಣೆ ಆಗುತ್ತದೆ.. ಇದು ನನ್ನ ಅಭಿಪ್ರಾಯ ಅಂದಳು ದೀಪ.
ಹಾಗಾದರೆ ಡೊಂಕು ನೆಟ್ಟಗಾದಂಗೇ ಇದೇ ಅಂದ ಸುರೇಶ
ಇಬ್ಬರು ನಕ್ಕು ಅವರವರ ಕೆಲಸಕ್ಕೆ ಹೊರಟರು...
ಯಾವುದು ವಿಪರೀತ ಒಳ್ಳೆಯದಲ್ಲ ಅಲ್ಲವೇ! ಮತ್ತೊಮ್ಮೆ ಯೋಚಸಿ ನೋಡಿ. ನಮ್ಮ ಜೀವನದಿಂದ ಮೊದಲು ದೇಶದ ವರೆಗು ಉದ್ಧಾರಕ್ಕಾಗಲಿ ಅನುದ್ಧಾರಕ್ಕಾಗಲಿ ನಾವೇ ಕಾರಣ.
ಆರೋಪ - ಪುಟ್ಟಕಥೆ
ರಾಮಣ್ಣ ಐನೂರರ ನೋಟನ್ನು ಏಣಿಸುತಿದ್ದ, ಕೊನೆಯಲಿ ಒಂದು ನೋಟು ಕಡಿಮೆಯಾಗಿತ್ತು. ತಾನೇ ತಪ್ಪಾಗಿ ಎಣೆಸಿರಬಹುದೆಂದು ಮತ್ತೊಮ್ಮೆ ಎಣಿಸಿದ ಮತ್ತು ಕೂಡ ಒಂದು ನೋಟು ಕಡಿಮೆಯಾಗಿತ್ತು. ಸ್ವಲ್ಪ ಹೊತ್ತು ಏನಾಗಿರ ಬಹುದೆಂದು ಯೋಚಿಸಿದ. ತಂದು ಇಟ್ಟಾಗಿಂದ ನಡೆದ ಘಟನೆಯಲ್ಲ ನೆನೆದ. ಹೇಗು ಎಲ್ಲು ಹೋಗಿರಲು ಸಾಧ್ಯವಿಲ್ಲವೆಂದು ದೃಢವಾಯಿತು. ಅಲ್ಲೇ ಕೋಣೆಯಲ್ಲಿ ಶಾಂತ ನೆಲ ವರಿಸುತ್ತಿದ್ದಳು. ರಾಮಣ್ಣ ನೀನು ನೋಡಿದಿಯಾ ಶಾಂತ ಐನೂರರ ನೋಟು ಅಂತ ಕೇಳದೆ ಥಟ್ಟನೆ ಕೇಳಿದರೆ ನಾನೇ ಕೊಡುತ್ತಿದ್ದೆ ಏತಕೆ ತೆಗೆದುಕೊಂಡೆ ಎಂದು ಕಸಿರುವಷ್ಟರಲ್ಲಿ ಪಂಖೆಯ ಗಾಳಿಗೆ ಹಾರಿ ಬಂದು ರಾಮಣ್ಣನ ಮುಂದೆ ಬಿತ್ತು ಆ ಐನೂರರ ನೋಟು. ಒಂದು ಮಾತಾಡದೆ ಶಾಂತ ಅಂದಿನಿಂದ ಅವರ ಮನೆ ಕೆಲಸಕ್ಕೆ ಬರಲಿಲ್ಲ.
ವಿಚಾರಿಸದೆ ಯಾರನ್ನು ಆರೋಪಿಸಬಾರದು
ಬಡವರಂದ ಮಾತ್ರಕ್ಕೆ ಅವರು ಕಳ್ಳರಲ್ಲ...
ನಿಯತ್ತಾಗಿ ದುಡಿಯುವ ಎಷ್ಟೋ ಜನ ಈ ರೀತಿ ಆರೋಪಣೆಗಳಿಗೆ ಒಳಗಾಗುತ್ತಿದ್ದಾರೆ.
ಜೀವನ ದೋಣಿ (ಕಥೆ)
ಹರಿಯುವ ನೀರಿಗೆ ದೋಣಿಯೊಂದನ್ನು ಮಾಡಿ ಬಿಟ್ಟಿದ್ದೆ. ಬಾಲ್ಯದ ನೆನಪುಗಳು ಕಣ್ಮುಂದೆ ಬಂದವು. ಚಿಕ್ಕ ಊರಿನಲಿ ಪುಟ್ಟ ಬೀದಿ. ಎದುರುಬದುರು ಮನೆಗಳು. ಓಣಿ ಮಕ್ಕಳಿಗೆಲ್ಲ ಮಳೆ ಬಂದರೆ ಅದೆಷ್ಟು ಸಂಬ್ರಮ. ಕಾಗದದ ದೋಣಿಗಳು ತುಂಬುತ್ತಿತ್ತು ನೀರಿನ ಹರೆತದಲಿ. ಬಾನನ್ನು ನೋಡುತ್ತಾ ಮಳೇ ನಿಲ್ಲಬೇಡ ನನ್ನ ದೋಣಿಯು ನಿಂತು ಹೋಗುತ್ತದೆಂದು ಕೂಗುತ್ತಿದ್ದೆವು. ಅಲ್ಲಿ ಇಲ್ಲಿ ಕಲ್ಲು ಹಾದರೆ ದೋಣಿಯನು ತಿರುಗಿಸಿ ಬಿಡುತ್ತಿದ್ದೆವು. ನಾವೇ ನಾವಿಕರಾಗಿ ಕಾಗದದ ದೋಣಿ ಹರಿಯದಂತೆ ಹರಿಯುವ ನೀರಿನಲ್ಲಿ ದೂರ ದೂರದ ತನಕ ಕೊಂಡೊಯ್ಯುತ್ತಿದ್ದೆವು.
ಈ ಬಾಲ್ಯದಾಟದಲಿ ತತ್ವವೇ ಅಡಗಿದೆಯಲ್ಲವೇ! ದೋಣಿ ನಮ್ಮ ಜೀವನ ಸೂಕ್ಷ್ಮವಾದದ್ದು, ಹರೆಯುವ ನೀರು ಕಾಲ, ಮಳೆೇ ದೇವರು. ಕಾಲದ ಜೊತೆ ಓಡುತ್ತಾ ನಾವಿಕರು ನಾವಾಗಿ ನಡೆಸುವೆವು ಜೀವನವೆಂಬ ದೋಣಿಯನು ಕಾಗದ ಮೆತ್ತಗಾಗಿ ಹರಿಯುವತನಕ..!
ದಾರಿಯಲ್ಲಿ ಸಿಕ್ಕಿದ ಸಿರಿ (ಕಥೆ)
ಯಾವ ಕಡೆ ನೋಡಿದರೂ ತುದಿ ಕಾಣದಾಗಿದೆ
ನಡೆದಷ್ಟು ದೂರ ದಾರಿ ಬರುತ್ತಲೇ ಇದೆ. ಈ ಜಗಕೆ ಆದಿ ಅಂತ ಯಾರಿಗು ತಿಳಿದಿಲ್ಲ ಯನ್ನುವ ಮಾತು ಸತ್ಯ ಎಂದೆನಿಸುತ್ತಿದೆ ಅಂತ ಯೋಚಿಸುತ್ತ ನಡೆಯುತ್ತಿದ್ದ ಆ ಮಧ್ಯವರ್ಗದ ಐವತ್ತೈದು ವರ್ಷದ ತಂದೆ.
ಮನೆಯಲ್ಲಿ ಬೆಳೆದು ನಿಂತ ಮಕ್ಕಳು ವಿಶ್ವ ವಿದ್ಯಾಲಯದಲ್ಲಿ ಓದು ತಿದ್ದಾರೆ.
ನಿನ್ನೇ ತಾನೆ ದೊಡ್ಡವಳ ವದ್ಯಾಲಯಕ್ಕೆ ಹಣ ಕಟ್ಟಿದೆ. ಇವತ್ತಾಗಲೇ ಚಿಕ್ಕವಳು ಕೇಳುತ್ತಿದ್ದಾಳೆ. ನನ್ನ ಜೀತ ಒಂದೇ ಇಟ್ಟು ಹೇಗೆ ಹೊಂದಿಸಲಿ ಯಂದು ಚಿಂತಿಸುತ್ತಾ ನಡೆಯುತ್ತಿದ್ದನು. ಅಷ್ಟರಲ್ಲಿ ರಾಮನಾಥ ಭೇಟ್ಟಿ ಆದನು. ರಾಮನಾಥ ಈತನ ಬಾಲ್ಯ ಸ್ನೇಹಿತ ಮುಂಚಿನಿಂದಲೇ ಶ್ರೀಮಂತರು ಆಗಿನ ಕಾಲಕ್ಕೆ ವಿದೇಶಕ್ಕೆ ಹೋಗಿ ಓದಿ, ಅಲ್ಲೇ ಉದ್ಯೋಗವ ಮಾಡುತ್ತಿದ್ದನು. ಈಗ ಮಕ್ಕಳ ಜೀವನ ಸ್ಥಿರ ಪಡಿಸಿ ಸೊಂತೂರಿನಲ್ಲಿ ದೊಡ್ಡ ಮನೆ ಕಟ್ಟಿಕೊಂಡು ಗಂಡ ಹೆಂಡತಿ ಸುಖವಾಗಿ ಇದ್ದಾರೆ. ರಾಮನಾಥರು ಶ್ರೀಧರನನ್ನು ವಿಚಾರಿಸಿದರು ಏಕೆ ಕಣಯ್ಯ ಚಿಂತಾಕ್ರಾಂತನಾಗಿರುವೆ. ಶಾಲೆಯಲ್ಲಿ ನೀನು ಪ್ರಥಮ ಶ್ರೇಣಿಯಲ್ಲಿ ಬರುತಿದ್ದೆ. ಜೀವನದ ಲೆಕ್ಕದಲ್ಲಿ ಏಕೆ ಹಿಂದೆ ಉಳಿದಿರುವೆಯಂದು ಕೇಳಿದ. ಅದೃಷ್ಟ ಕಣಯ್ಯ ಏನು ಮಾಡಬೇಕು ಎನ್ನುವಾಗ ರಾಮನಾಥರು ಹೇಳಿದರು ಅದೃಷ್ಟ ಸೃಷ್ಟಿ ಮಾಡಿಕೊಬೇಕು. ನಿನ್ನ ಮಕ್ಕಳು ಬೆಳೆದಿದ್ಜಾರೆ ನಿನ್ನ ಹಾಗೆ ಬುದ್ಧಿವಂತರು ಸಹ ನೀನು ಕಂಪನಿಯಲ್ಲಿ ಕೆಲಸ ಮಾಡಿ ತರುವದರಮೇಲೆ ಮಾತ್ರ ಆಧಾರವೇತಕೆ. ಚಿಕ್ಕ ಮಕ್ಕಳಿಗೆ ಇಬ್ಬರು ಪಾಠ ಹೇಳಲಿ ನಾಲಕ್ಕು ಕಾಸು ಬರುತ್ತದೆ. ವಿದ್ಯಾದಾನ ಮಾಡಿದಂತಾಯಿತು ಹಾಗು ಅವರ ವಿದ್ಯಾಲಯದ ಹಣದ ವ್ಯವಸ್ಥೆ ಮಾಡಿದಂತಾಯಿತು. ಪಾಠ ಮಾಡುವುದರಿಂದ ಮತ್ತಷ್ಟು ಅವರ ಜ್ಞಾನ ಹೆಚ್ಚಿಸಿಕೊಂಡಂತಾಯಿತು ಯಂದು ಸಲಹೆ ನೀಡಿದರು.
ಶ್ರೀಧರನಿಗೆ ಸರಿಯಂದೆನಿ ಮನೆಗೆ ಹೋಗಿ ಹೆಂಡತಿ ಮಕ್ಕಳಿಗೆ ವಿಷಯವನ್ನು ವಿವರಿಸಿದನು. ಚಿಕ್ಕದಾಗಿ ಅಧ್ಯಾಪನೆ ಶುರು ಮಾಡಿದರು ಆ ಇಬ್ಬರು ಮಕ್ಕಳು. ಸ್ವಲ್ಪ ಕಾಲದಲ್ಲಿ ಬೆಳೆದು ದೊಡ್ಡದಾಗಿ ವಿದ್ಯಾಸಂಸ್ಥೆಯೇ ಆಯಿತು. ಶ್ರೀಧರನು ತನ್ನ ಉದ್ಯೋಗ ಬಿಟ್ಟು ತಮ್ಮ ಸ್ವಂತ ಸಂಸ್ಥೆಯ ವ್ಯವಹಾರಗಳನ್ನು ನೋಡಿಕೊಂಡನು. ಇಬ್ಬರಿಗೂ ಒಳ್ಳೆಯಕಡೆ ಮದುವೆ ಆಯಿತು. ಸಂಸ್ಥೆಯ ಉದ್ಧಾರಣೆ ಮಾಡುತ್ತಾ ನಾಲಕ್ಕು ಜನಕ್ಕೆ ವಿದ್ಯೆಯನ್ನು ಕಲಿಸುತ್ತಾ ಜೀವನವನ್ನು ಸುಖವಾಗಿ ನಡೆಸಿದರು.
ಎಷ್ಟೇ ಬುದ್ಧಿವಂತರಿದ್ದರು ಕೆಲವೊಮ್ನೆ ಮತ್ತೊಬ್ಬರ ಹಿತ ಸೂಚನೆಗಳು ಜೀವನದಲ್ಲಿ ಅತ್ಯಾವಶ್ಯಕ. ಸರಿಯಾದ ರೀತಿಯಲ್ಲಿ ಸೂಚನಗಳನು ಅನುವರ್ತಿಸಿಸದರೇ ಹೊಸ ದಾರಿ ಕಾಣ ಬಹುದು.
_ರೂಪ ರಾಣಿ ಬುಸ್ಸ
ಸುಧ- ಚಿಕ್ಕ ಕಥೆ
ಎಷ್ಟು ಪ್ರಯತ್ನಿಸಿದರು ಅಂದುಕೊಂಡಂತೆ ಸರಿಯಾದ ಸಮಯಕ್ಕೆ ಸ್ಥಳವನು ತಲುಪಲು ಸಾಧ್ಯವಾಗಲಿಲ್ಲ,
ಎಂದು ಯೋಚಿಸುತ್ತಾ ಮೆಲ್ಲನೆ ಒಳಗೆ ಹೋದಳು ಸುಧ. ಸಾಕಷ್ಟು ಜನ, ಕೆಲವರು ನಿಂತು ಕೆಲವರು ಕುಳಿತು ಕಾಯುತಿದ್ದನ್ನು ನೋಡುತ್ತಾ ದೇವರೇ ನೋಡುವಾಗ ಎದೆಯಲ್ಲಿ ಭಯ ತುಂಬುತಿದೆ. ಒಳಗೆ ಏನು ಕೇಳುವರೋ ಏನು ಹೇಳುವರೋ ಯಂದು ಕುತೂಹಲವು ಹೆಚ್ಚಾಗುತ್ತಿದೆ ಯಂದು ತನ್ನೊಳಗೆ ತಾನು ಅಂದುಕೊಳ್ಳುತ್ತಿದ್ದಳು. ಮೆಲ್ಲನೆ ಪಕ್ಕದಲ್ಲಿ ಕುಳಿತಿಹವರನ್ನು ಮಾತಾಡಿಸಿದಳು. ಅವರ ಬಗ್ಗೆ ತಿಳಿದು ಇನ್ನು ಗಾಬರಿಗೊಳ್ಳುತ್ತಿರುವಾಗ ಸಂಖ್ಯೇ ೪೨ ಮೂರನೇ ಹಾಗು ಕೊನೆಯ ಬಾರಿ ಅಂತ ಕರೆದನು ಕಚೇರಿಯ ಜವಾನ. ನನ್ನ ಚೀಟಿಯಲ್ಲಿ ಇರುವ ಸಂಖ್ಯೆಯೇ ಆಗಿತ್ತು. ಅದಕ್ಕೆ ಮೊದಲು ಎರಡು ಬಾರಿ ಕರೆದು ಮತ್ತೆಲ್ಲಲರ ಸರದಿಯು ಮುಗಿದು ಕೊನೆಯ ಬಾರಿ ನನ್ನನ್ನು ಕರೆಲಾಗಿತ್ತು. ಒಳಗೆ ಹೋಗಿ ನೋಡಿದೆ ಸಾಲಾಗಿ ೧೦ ಜನ ಕುಳಿತಿದ್ದರು. ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾ ಹೋದರು. ತಿಳಿದದ್ದು ಹೇಳಿದೆ. ಏಕೆ ನಿನಗೆ ಈ ಕೆಲಸ ಕೊಡಬೇಕೆಂದು ಕೇಳಿದರು ಅಲ್ಲಿದ್ದ ಹಿರಿಯರು. ಎಲ್ಲರ ಹಾಗೆ ಪ್ರಾಮಾಣಿಕವಾಗಿ ನಿಯತ್ತಿನಿಂತ ದುಡಿಯುತ್ತೇನೆ ಯಂದು ಹೇಳುವುದಿಲ್ಲ ನಾನು. ನನ್ನ ಕೆಲಸ ವಿಶೇಷರೀತಿಯಲ್ಲಿ ಇರುತ್ತದೆ ಯಂದು ಹೇಳುವೆ ಅದು ಹೇಗೆ ಯಂದು ನೀವು ನೋಡಬೇಕಾದರೆ ನನಗೆ ಕೆಲಸ ಕೊಡಿ ಪ್ರತ್ಯಕ್ಷವಾಗಿ ಕಾಣಿರಿ. ಬಾಯಿ ಮಾತಲ್ಲಿ ನಾನು ಹೇಳುವುದು ನೀವು ಕೇಳುವುದು ಏತಕೆ ಅಂದಳು. ಅವಳ ಮಾತು ಧೈರ್ಯಕೆ ಮೆಚ್ಚಿದ ಸಂದರ್ಶನಕಾರರು ಅವಳಿಗೆ ಉತ್ತಮ ವರಮಾನದ ಉದ್ಯೋಗ ಕೊಟ್ಟರು. ಸಮಯಕ್ಕೆ ತಲುಪಲು ಸಾಧ್ಯವಾಗದಿದ್ದರು ಸಮಯಸ್ಫೂರ್ತಿಯಿಂದ ಸುಧಳಿಗೆ ಉದ್ಯೋಗ ದೊರಕಿತು.
Kommentare