top of page
Writer's pictureRoopa Rani Bussa

ಭಾವಗಳ ಬೇವುಬೆಲ್ಲ


ಸುಗಮ ಜೀವನದ ಸ್ವರಿತ ಮನಸಿನ ಸಂತೋಷ. ನಮ್ಮ ಸುತ್ತಿನ ಪ್ರಪಂಚದ ಕಿರಣಗಳು ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುವುದು ಅತ್ಯಂತ ಸಹಜ. ಬದಲಾಗುತ್ತಿರುವ ಕಾಲದ ಜೊತೆಗೆ ಜೀವನ ಶೈಲಿಗಳಲಿ ಸಹಿತ ಅನೇಕ ಬದಲಾವಣೆಗಳು ಕಂಡು ಬರುತ್ತವೆ. ಈ ಪ್ರಕ್ರಿಯೆಯಲಿ ಭಾವಗಳು, ಭಾವನೆಗಳು ಬಹು ತರಹದ ಅನುಭವಗಳನು ಪಡೆಯುತ್ತವೆ ಹಾಗೇ ನಮ್ಮ ಮನಸ್ಥಿತಿಗೆ ಪ್ರತಿಬಿಂಬವಾಗಿ ನಿಲ್ಲುತ್ತವೆ.

ಒಂದೇ ರೀತಿಯ ಜೀವನದಿಂದ ಬೇಸರವಾಗಿ, ನಿರ್ಜೀವಾದ ಜೀವನವನು ಹೋಗಳಾಡಿಸಲು ಆ ಕಾಲದಲಿ ಹಬ್ಬಗಳನು ವಿಶಿಷ್ಠ ದಿನಗಳಲಿ ಆಚರಿಸುತಿದ್ದರು. ಚಾರಿತ್ರಕ ಘಟನೆಗಳು ತಿಳಿಸಿದ ಕಥೆಗಳು ಉಪಕಥೆಗಳನ್ನು ಈ ನವ ಯುಗದವರೆಗೆ ಉಪಯುಕ್ತಿ ಮಾಡುತ್ತಾ ಸಂಪ್ರದಾಯಕಗಳನ್ನು ಸಜೀವವಾಗಿ ಇಟ್ಟಿರುವ ನಮ್ಮ ಸಂಸ್ಕಾರ ನಮಗೇ ತಿಳಿಯದೆ ನಮ್ಮ ಮನಸುಗಳಲ್ಲಿ ಪ್ರಶಸ್ಥ ಸ್ಥಾನವನು ಪಡೆದಿದೆ. ಏನೇ ಕಷ್ಟಗಳು ಬರಲಿ ಎಲ್ಲವನ್ನು ಮರೆತು ಹಬ್ಬಹರಿದಿನಗಳಲಿ ಕುಟುಂಬದ ಜೊತೆ ಸ್ನೇಹಿತರ ಜೊತೆ ಬಂಧು ಬಳಗಗಳ ಜೊತೆ ಸಮಯ ಕಳೆಯುತ್ತಾ ಎಲ್ಲರ ಒಟ್ಟಿಗೆ ಕುಳಿತು ಭಕ್ಷ್ಯ ಭೋಜನಗಳು ಮಾಡುತ್ತಾ ಸುಖಸಂತೋಷದಿ ಸಮಯಕಳೆಯುವುದು ನಮ್ಮ ಧನಾತ್ಮಕ ಶಕ್ತಿಗೆ ಉತ್ತೇಜನ ತುಂಬುತ್ತದೆ. ಹಬ್ಬಗಳಲಿ ನೋಡಿರಿ ನಮಗೇ ತಿಳಿಯದ ಹುಮ್ಮಸ್ಸು ಇಚ್ಛೆಯಿಂದ ಆಚರಿಸುವಾಗ ನಮ್ಮ ಹೃದಯವು ಹಾಗು ಮನೆಯಲ್ಲಿನ ವಾತಾವರಣ ಅದೆಷ್ಟು ಮನ ಮೋಹಕವೆನಿಸುತ್ತದೆ.


ಆಗಿನ ಸೌರಭವನು ಮುಂದುವರಿಸುವುದರ ಜೊತೆ ಈಗಿನ ಕಾಲದ ಮನೋರಂಜನಗಳಲಿ ಸಹಿತ ಭಾಗವಹಿಸುತ್ತಾ ನಮ್ಮ ಯೋಚನೆಗಳನು ಮತ್ತು ಆನಂದ ಪಡೆಯುವ ನೂತನ ಮಾರ್ಘಗಳಿಗೆ ಸುಂದರವಾಗಿ ಹೊಂದಿಕೊಂಡಿದ್ದೇವಿ. ಹಬ್ಬಗಳ ಬಿಟ್ಟು ಮನೆಯಲ್ಲಿ ಸಂಬ್ರಮಗೊಳಿಸುವುದು ನಮ್ಮ ಅಥವಾ ಮನೆಯಲ್ಲಿರುವ ಸದಸ್ಯರ ಹುಟ್ಟು ಹಬ್ಬಗಳು. ಹರ್ಷಪೂರಿತ ಭಾವಚಿತ್ರಗಳನು ತೆಗೆದು ಆ ಸಮಯದ ಮೌಲ್ಯವನು ನಮ್ಮ ಕೈಯಲ್ಲಿ ಸದಾ ಇಟ್ಟುಕೊಂಡು ಸ್ಮರಿಸುವಾಗಲೆಲ್ಲ ಅದರ ಹೊಳಪನು ಕಂಡು ಆನಂದಿಸುವುದು ಮನಸಿಗೆ ಅದೆಷ್ಟು ತೃಪ್ತಿಯನ್ನು ಕೊಡುತ್ತದೆ. ಈ ಜೀವನ ಓಟದಲಿ ಎಲ್ಲರು ಬಹಳ ವ್ಯಸ್ತರಾಗಿದ್ದಾರೆ. ನಿತ್ಯ ಅದೇ ಓಡಾಟ ಪಕ್ಕದಲ್ಲಿರುವವರ ಜೊತೆ ಮಾತಾಡಲು ಸಹಿತ ಸಮಯವಿಲ್ಲದ್ದಂತ ವೇಗ ಆಗೋಗಿದೆ ಕಾಲ. ನಮ್ಮ ಭಾವನೆಗಳಿಗೆ ಒಮ್ಮೊಮ್ಮೆ ಬೇರೇ ಚಟುವಟಿಕೆಗಳನು ಆಶಿಸುತ್ತವೆ. ಮನಸಿಗೊಪ್ಪುವವರ ಜೊತೆ ಗೆಟ್ ಟುಗೆದರ್ಗಳು ಪಾಟ್ ಲಕ್ ಪಾರ್ಟಿಗಳು ಈಗಿನ ಹೊಸ ತರಹಾ ಪದ್ಧತಿಗಳು ನಮ್ಮ ದಿನ್ಯಚರ್ಯೆಯಲಿ ಪರಿವರ್ತನೆ ನೀಡುವ ವಿನೋದ ಪ್ರಕ್ರಿಯಗಳಾಗಿವೆ. ಆಟ, ಹಾಡುಗಳು ಕ್ರೀಡೆಗಳು ನೃತ್ಯ ಹೀಗೆ ಎಷ್ಟೋ ವಿಷಯಗಳು ನಮ್ಮ ಹೃದಯವನು ಸೆಳೆಯುತ್ತವೆ. ಭಾವನೆಗಳು ಆರೋಗ್ಯವಾಗಿ ಇಡುತ್ತವೆ.


ಕೈಚಳಕಗಳು, ಕಲೆಗಳು ಶ್ರೇಷ್ಠವಾಗಿರುವವರಿಗೆ ಅವರ ಭಾವನೆಗಳೇ ಅವರಿಗೆ ಆನಂದದ ಸಿರಿ. ಅವರ ಕಲೆಯಲ್ಲಿ ಮಗ್ನರಾಗಿ ಭಾವೋದ್ವೇಗಗಳ ಚಿಲುಮೆಯಲಿ ತಾವು ತಮ್ಮನ್ನು ತಮ್ಮ ಸುತ್ಚಿನ ಪ್ರಪಂಚವನ್ನು ಮರೆತು ತನ್ಮಯರಾಗಿರುವಾಗ ಅವರ ಆನಂದಕೆ ಹದ್ದಿರುವುದಿಲ್ಲ. ಬಹಳಷ್ಟು ಸಲ ಕಲಾವಿದರ ಸೃಷ್ಟಿ ಪ್ರಪಂಚವನ್ನೇ ವಿಸ್ಮಯಗೊಳಿಸುತ್ತದೆ. ಚಿತ್ರಕಾರರು, ಕವನಗಾರರು, ನಾಟ್ಯಕಾರರು, ಗಾಯಕರು ಅವರವರ ರಂಗಗಳಲಿ ಪ್ರಖ್ಯಾತಿ ಪಡೆದಿರುವರು. ಎಲ್ಲವು ಭಾವನೆಗಳನ್ನು ತಟ್ಟಿ ನಮ್ಮೊಳಗಿನ ಕೌಶವನು ಹೊರತರುವುದು. ಹಾಗೇ ಕಲೆಗಳನು ನೋಡುವ ಪ್ರೇಕ್ಷಕರು, ಕೇಳುವ ಶ್ರೋತರು, ಅನುಭವಿಸಿ ಲೀನರಾಗುವ ಕಲಾಭಿಮಾನಿಗಳು ತಮ್ಮ ಮನಸಿಗೆ ಇಷ್ಟವಾದ ಕಲಾಕಾರರ ಪ್ರಸ್ತುತಗಳನು ಆಶ್ವಾದಿಸುತ್ತಾ ಅವಗಳದೇಯಾದ ಭಾವನಾಲೋಕದಲಿ ಉತ್ಸಾಹದ ಹೆಬ್ಬಾಗಿಲು ತೆರೆದು ಧನಾತ್ಮಕತೆಯನು ಆಹ್ವಾನಿಸುತ್ತ ತಮ್ಮ ಭಾವನೆಗಳಿಗೆ ಬೆಲ್ಲ ತಿನಿಸುವರು. ಕಲಾವಿದರು ಇದ್ದಲ್ಲಿ ರಸಿಕರು ಕೂಡ ಬೇಕಲ್ಲವೇ. ಒಬ್ಬೊಬ್ಬರ ಭಾವನೆಗಳಲಿ ಅದೆಷ್ಟು ಮಾಧುರ್ಯಗಳು ಅಡಗಿದಿಯೋ ಯಾರಿಗು ಅರಿಯದು. ತಮಿಗೆ ಬೇಕಾದ ರೀತಿಯಲಿ ಭಾವನೆಗಳ ಭಾವಗಳಿಗೆ ಸುಂದರ ಆವರಣ ಕೊಡಲು ಪ್ರತಿ ಒಬ್ಬರ ಮನ ಪ್ರಯತ್ನಿಸುತ್ತದೆ ಅಲ್ಲವೆ.

ಮನಃಶಾಸ್ತ್ರಜ್ಞರು ಸ್ಥಳ ಬದಲಾವಣೆಯಿಂದಲು ಭಾವನೆಗಳಿಗೆ ಹೊಸ ತರಹದ ಅನುಭವಗಳು ತರುತ್ತವಂದು ತಿಳಿಸುತ್ತಾರೆ. ಬೇರೆ ಪ್ರದೇಶದಲಿ ಏನೇನು ಹೊಸದಿರಬಹುದೆಂದು ಕುತೂಹಲಗಳು ಅಂತರಾಳದಲಿ ಭಾವಗಳನು ಸ್ಪರ್ಷಿಸುತ್ತವೆ. ನಿಸರ್ಗದ ಚೆಲುವಿಗೆ ಮನ ಸೋತಾಗ ದಿವ್ಯವಾದ ಅನುಭೂತಿಯನು ನೀಡುತ್ತದೆ. ವಿಷಣ್ಣೆತೆಗೆ ಒಳಗಾದವರಿಗೆ ಸ್ಥಳ ಬದಲಾವಣೆ ಒಂದು ತರಹದ ಚಿಕಿತ್ಸೆಯಾಗಿರುತ್ತದೆ. ಪ್ರಾಕೃತಿಕ ಸೌಂದರ್ಯ ಅನೇಕ ರೋಗಿಗಳ ಭಾವನೆಗಳಿಗೆ ಪ್ರತಿಧ್ವನಿಸಿ ಅವರಿಗ ಗುಣ ಪಡಿಸಿದ್ದು ಉಂಟು.


ಈ ರೀತಿ ಒಲುಮೆ ಚೆಲುಮೆ ಬೆಳೆಸುತ್ತಾ ಪ್ರೀತಿ ವಿಶ್ವಾಸಗಳನು ಹೆಚ್ಚಿಸುತ್ತ ಭವ್ಯವಾದ ಭಾವನಾತ್ಮಕ ವಾತಾವರಣವನ್ನು ಸೃಷ್ಟಿಸಿಕೊಳ್ಳುವ ಶಕ್ತಿ ನಮ್ಮ ಮನೋಭಾವಗಳಿಗೆ ಇರುವುದು ಎಂಬ ಸತ್ಯವನು ಅರಿಯಬೇಕು. ಮನಸಿಗೆ ಒಪ್ಪದಂದತಹಾ ಪರಿಸ್ಥಿತಿಯಲಿ ಭಾವನೆಗಳನು ಶಾಂತಗೊಳಿಸುವ ನಿಪುಣತೆ ನಾವು ಕಲೆತಲ್ಲಿ ನೋವುಗಳನು ಮತ್ತು ಆ ಸ್ಥಿತಿಯ ಬೇವನ್ನು ಸುಲಭವಾಗಿ ಅಗೆಯೋಣ. ಆ ಅನುಭವಗಳ ಸಾರದಿಂದ ನಮ್ಮ ಭಾವನೆಗಳಿಗೆ ಹೊಸ ದೃಷ್ಟಿ ನೀಡುತ್ತ ನಮ್ಮ ಸುತ್ತಿನ ಆವರಣವನ್ನು ಯೋಗದಾಯಕ ಮಾಡೋಣ. ಇದರಿಂದ ನಮ್ಮ ಅಂತರಂಗದಲಿರುವ ಭಾವನೆಗಳಿಗೆ ಅತ್ಯುತ್ತಮ ಸಂಸ್ಕಾವನು ಅಲವಡಿಸಿದಹಾಗೆ ಆಗುತ್ತದೆ. ಬೇವು ಆರೋಗ್ಯಕ್ಕೆ ಒಳ್ಳೆಯದಲ್ಲವೆ ಹಾಗೆ ಬೇವಿನಂತಹ ಕಹಿ ಸನ್ನಿವೇಶಗಳು ಸಹ ನಮ್ಮ ಜೀವನ ಮಾರ್ಗಗಳಿಗೆ ಕೂಡ ಆರೋಗ್ಯಕರವೇಯಂದು ತಿಳಿದು ಅನುಭವದ ಹಾದಿಯಲಿ ಮರೆಯದ ಪಾಠ ಕಲಿಯೋಣ.


ನಮಗೆ ಬೇಕಾದ ರೀತಿಯಲಿ ನಮ್ಮ ಭಾವನೆಗಳನು ಚಿತ್ರಿಸ ಬಹುದು. ಆದರೂ ಮನಸು ಒಂತರಾ ಸೂಕ್ಷ್ಮ ಮತ್ತು ವಿಚಿತ್ರ ಅನುಕೂಲಗಳಿಗೆ ಹಾಗು ಪ್ರಯೋಜನಕರವಾದ ವಿಷಯಗಳು ಎಷ್ಟೇ ನಡೆದರೂ ಒಂದು ಅನಾನುಕೂಲವು ಅಥವಾ ಎದುರು ನೋಡದ ಕಷ್ಟ ಬಂದರೂ ಬಹಳ ಚಿಂತೆಯಲ್ಲಿ ಮುಳುಗಿ ಅತೃಪ್ತರಾಗಿ ತಮ್ಮ ಭಾವನೆಗಳಿಗೂ ತಮ್ಮ ಸುತ್ತಿನ ಜನರಿಗೂ ನಿರಿತ್ಸಾಹದ ಛಾಯೆಗಳು ತರುವರು. ಮನಸ್ಥಿತಿ ನಲಿಯುತ್ತಿರುವಾಗ ಎಲ್ಲವೂ ಚಂದವೇ ಅದೇ ಮನಸಿಗೆ ನೋವಾದರೇ ಭಾವನೆಗಳಿಗೆ ಆಗುವ ಗಾಯ ಒಳಗೊಳಗೇ ಕುಸಿಯುತ್ತದೆ. ನಮಗೆ ಬಂದ ಕಷ್ಟ ಮತ್ತೊಬ್ಬರಿಗೆ ಹೇಳಿಕೊಳ್ಳಲಾಗದೆ ನಮ್ಮೊಳಗೇ ಇಟ್ಟುಕೊಳ್ಳಲಾಗದಿದ್ದಾಗ ಮನದ ಪಾಡು ನಕಾರಾತ್ಮಕವೇ ಆವರಿಸುತ್ತದೆ. ಇಂತಹಾ ಮನಸ್ಥಿತಿ ಅಷ್ಟು ಸುಲಭವಾಗಿ ದುಃಖ ನಿಷ್ಕ್ರಿಯವಾಗುದಿಲ್ಲ. ಅಂತಹಾ ಮನಸಿನ ಭಾವನೆಗಳಿಗೆ ಎಲ್ಲವೂ ಶೂನ್ಯವಾಗಿ ಕಂಡುಬರುತ್ತದೆ. ಎಲ್ಲದರಲ್ಲು ಅಪಾಯ ಕಾಣಿಸಿಕೊಳ್ಳುವುದು, ಎಲ್ಲರು ಅವರನ್ನು ದ್ವೇಷಿಸುವಂತೆ ಕಾಣುವುದುದರಿಂದ ಮಾನಸಿಕ ಹಿಣಸೆ ಪಡೆಯುತ್ತಾ ವಿಷಣ್ಣತೆಗೆ ಒಳಗಾಗುತ್ತಾರೆ.


ಇನ್ನು ಒಬ್ಬರು ಮುನ್ನೇರುವಿಕೆ ಸಹಿಸಲಾಗದವರು ತಮ್ಮ ಮನಸಲ್ಲಿರುವ ಕಲ್ಮಷವನು ಉಪಯೋಗಿಸಿ ಮತ್ತೊಬ್ಬರನು ತುಳಿಯುವ ಪ್ರಯತ್ನಗಳು ಮಾಡುತ್ತಿರುತ್ತಾರೆ. ಕ್ರೂರ ಭಾವನೆಗಳು ಸಮಾಜಕ್ಕ ಹಾನಿಕರ. ತುಂಬಿದ ಹಾಲು ಪಾತ್ರೆಗೆ ವಿಷಬೆರೆಸುವಂತೆ ಒಬ್ಬರ ಕೆಟ್ಟ ಭಾವನೆಗಳಿಂದ ಆ ಸುತ್ತಿನ ಸಮಾಜದ ಮೇಲೆ ಪ್ರಭಾವ ಬೀರುತ್ತದೆ. ಸಿಟ್ಟು, ದ್ವೇಷ, ಅಸೂಯೆ ತದಿತರ ನಕಾರಾತ್ಮಕ ಗುಣಗಳು ಇರುವವರ ಜೊತೆ ಇದ್ದರೆ ನಮ್ಮ ಭಾವನೆಗಳು ಆಲೋಚನಾ ವಿಧಾನದಲ್ಲು ಖಂಡಿತ ಅವುಗಳ ಪರಿಣಾಮ ಬೀರುತ್ತವೆ ಮತ್ತು ನಮ್ಮ ಮನಸಿಗೆ ನೆಮ್ಮದಿ ಇಲ್ಲದಹಾಗೆ ಆಗಬಹುದು. ನೆಮ್ಮದಿ ಇಲ್ಲದ ಮನಸಿನ ಭಾವನೆಗಳ ಕಹಿ ನಮ್ಮ ಜೀವನ ವಿಧಾನದಲ್ಲಿ ಅನೇಕ ತೊಂದರೆಗಳು ಉಂಟು ಮಾಡುವ ಸಾಧ್ಯತೆ ಇದೆ.


ಮನಸಿನ ಸ್ಥಿತಿಯನು ಪ್ರತಿಬಿಂಬಿಸುವುದು ಭಾವನೆಗಳು ಆದುದರಿಂದ ಆದಷ್ಟು ನಿರ್ಮಲವಾಗಿ ಇಟ್ಟುಕೊಂಡು ತಾನು ತೊಂದರೆಗಳಲ್ಲಿ ಸಿಲುಕದೆ ತಮ್ಮ ಸುತ್ತಿನ ಜನರಿಗೂ ತೊಂದರೆ ಉಂಟು ಮಾಡದ ಹಾಗೆ ಶುದ್ಧ ಮನಸು ಇಟ್ಟುಕೊಳ್ಳುವುದು ನಮಿಗೂ ಮತ್ತು ಎಲ್ಲರಿಗೂ ಉತ್ತಮವಾಗಿ ಇರುತ್ತದೆ.


ಸ್ವಲ್ಪ ಸುಖ ಸ್ವಲ್ಪ ದುಃಖ ಎಲ್ಲರ ಜೀವನದಲ್ಲು ಸಹಜ ಅಲ್ಲವೇ. ನಮಗೆ ಪರಿಸ್ಥಿತಿಗಳು ಪ್ರತಿಕೂಲಿಸಿದಾಗ ಭಾವನೆಗಳಿಗಿದೊಂದು ಪರೀಕ್ಷೆಯಂದು ತಿಳಿದು ಅದನ್ನ ಗೆದ್ದು ಮುಂದೆಬರುವ ಆತ್ಮಸ್ಥೈರ್ಯ ಕೊಡುವಂತಹ ಮನಸುಗಳ ಜೊತೆ ತಮ್ಮ ಸಮಯ ಕಳೆಯಲು ಪ್ರಯತ್ನಿಸಿದಾಗ ನಮಗೆ ತಿಳಿಯದಂತೆಯೇ ಭಾವನೆಗಳಿಗೆ ಒಂದು ಹೊಸ ರೂಪ ಕೊಡುವ ಯತ್ನ ಮಾಡುತ್ತಿರುತ್ತೀವಿ. ಬೇವಿಗೂ ಬೆಲ್ಲಕ್ಕೂ ಹೊಂದುಕೊಂಡು ಆರಟಕ್ಕೂ,ಹೋರಾಟಕ್ಕೂ ಹಾಗೂ ಪಾರಾಟಕ್ಕೂ ಬೇರೆಬೇರೆ ರೂಪ ತೋರುವ ಭಾವನೆಗಳ ಬಿಂಬವೇ ನಮ್ಮ ವ್ಯಕ್ತಿತ್ವವಾಗಿ ಉಳಿಯುತ್ತದೆ.


ನಮ್ಮ ಸುಧಾರಣೆಗಾಗಿ ನಾವೇ ಪ್ರಯತ್ನಿಸಬೇಕು. ನಮ್ಮ ಭಾವನೆಗಳನು ವಿಪರೀತ ಹಂತಕ್ಕೆ ಸೇರದಹಾಗೆ ನಿಯಂತ್ರಿಸ ಬಲ್ಲ ಶಕ್ತಿ ನಮ್ಮ ಮನಸಿಗೆ ಮಾತ್ರ ಉಂಟು. ಆದಷ್ಟು ಒತ್ತಡ ಕೊಡದೆ ಹೃದಯವನ್ನು ಧನಾತ್ಮಕದ ಕಡೆ ಮರಳಿಸಿಕೊಂಡಲ್ಲಿ ನಮ್ಮ ಈ ಪುಟ್ಟ ಜೀವನಕೆ ನಿಗಮ ಸಿಗುವಂತಾಗಿ ಭಾವೋದ್ವೇಗಗಳನು ವಿಜೃಂಬಿಸದಾಂಗೆ ತಡೆಯಲು ಸಾಧ್ಯವಾಗ ಬಹುದು.


ಈ ಹೊಸ ವರುಷದ ಆನಂದವಾಗಿ ಆಚರಿಸುತ್ತಾ ಯುಗಾದಿಯ ಶುಭದಿನದಲಿ ಬೇವು ಬೆಲ್ಲ ಸವಿದು ಬರುವ ಕ್ಷಣಗಳು ಸುಖ ಶಾಂತಿ ನೆಮ್ಮದಿ ಎಲ್ಲರಿಗೂ ಕೊಡುತ್ತಾ ಆರೋಗ್ಯವೇ ಮಹಾಭಾಗ್ಯವೆಂದು ಭಾವನೆಗಳ ಶಾಂತಿಯನ್ನು ಬಯಸುತ್ತ ನಿಮ್ಮೆಲ್ಲರಿಗೂ ಶರ್ವಾರಿ ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು ತಿಳಿಸುತ್ತೇನೆ.


ಸರ್ವೇಜನಾ ಸುಖಿನೋ ಭವಂತು

ಜೈ ಕರ್ಣಾಟಕ

ಜೈ ಹಿಂದ್

ವಂದನೆಗಳು 🙏🏻


37 views0 comments

Recent Posts

See All

Comments


Post: Blog2_Post
bottom of page