ಲೇಖಗಳು ಪ್ರೀತಿಯ ಲೇಖಗಳು
#ಪ್ರೀತಿಯ ಕ್ಯಾಮರಾ

ಸೆರೆ ಹಿಡಿಯುವೆ ಕಳೆದ ಸಮಯ

ನಗು ಮುಖಗಳಿವೇ ನಿನ್ನ ಹತ್ತಿರ

ನೆನಪಿನ ಖಜಾನೆ ನೀ ಹಿಡಿದ ಚಿತ್ರ

ನಿನ್ನಯ ಸಹಾಯ ನಮಗೆ ವರ


ಚಿತ್ರಗಳು ನೋಡುವ ಪ್ರತಿ ಸಲ

ಎಲ್ಲರ ಮನ ಮನೋಹರ

ಮುಗುಳ್ನಗೆಗಳು ಬಲು ಸುಂದರ

ಎಲ್ಲ ನಿನ್ನಯ ಉಪಕಾರ


#ಪ್ರೀತಿಯ ಕರ್ನಾಟಕ

ನೀ ಪ್ರಶಸ್ತವಾದ ಪಾರಿಜಾತೆ

ದೇವಲೋಕದಿಂದ ಧರೆಗೆ

ಬಂದು ಸುಗಂಧಿಸುವ ಮಾತೆ


ಕವಿರತ್ನಗಳು ತುಂಬಿದಂತ

ಕಿರೀಟ ನೀನು ಧರಿಸಿ ಬಂದೆ

ಜಕ್ಕಣ್ಣನು ಕೆತ್ತಿ ತಂದ

ಶಿಲ್ಪದಂತೆ ನೀ ರೂಪವಂತೆ


ನಿನ್ನ ಸಂತತಿ ನಾನೆಂದು

ಹೆಮ್ನೆಯಿಂದ ಹೇಳಿಕೊಂಬೆ

ಕಸ್ತೂರಿ ಕನ್ನಡವ ನುಡಿದು

ದಿವ್ಯಾರ್ಚನೆ ನಾ ಮಾಡುವೆ


#ಪ್ರೀತಿಯ ನಿಷ್ಠೆ

ಬಿಡದಿರು ಮನವನು

ಉದ್ಧರಿಸು ಮಾನವನು

ರಕ್ಷಿಸು ಮಾನ ವನು


ಕಾಣದು ನಿನ್ನಯ ಶ್ರೇಷ್ಠತೆ

ಭಕ್ಷದಲಿ ಉಪ್ಪಿನಂತೆ

ನಿನ್ನ ಸಹಕಾರದಿಂದಲೇ ಸಿದ್ಧತೆ


ಬದಲಾದ ಜೀವನ ಶೈಲಿಯಲಿ

ನಿನ್ನಯ ಉಪಸ್ಥಿತಿ ಎಂದು ಇರಲಿ

ನಿನ್ನಯ ಅಸ್ತಿತ್ವ ಮರೆಯಾಗದಿರಲಿ


#ಪ್ರೀತಿಯ ಸಂಗೀತ

ಶೃತಿಲಯವೇ ನಿನ್ನ ಶ್ವಾಸ

ನೀ ಹೌದು ಚಂದದ ಹವ್ಯಾಸ

ಎಲ್ಲರ ಮನಸಿನ ಉಲ್ಲಾಸ


ರಾಗ ಭಾವಗಳನು ಕಲಿಸಿ

ಮಾಧುರ್ಯವ ನೀ ಸುರಿಸಿ

ಆನಂದ ಕೊಡುವೆ ಮನದಲಿ ನೆಲಿಸಿ


ಸ್ವರಗಳು ಏಳೇ ಆದರು

ನಾದಗಳು ಸಾವಿರಾರು

ಶ್ರೋತರ ಹೃದಯಕೆ ನಜರು.


#ಪ್ರೀತಿಯ ಕನ್ನಡಿಗರೆ

ಮೊದಲು ಮಾನವರಾಗೋಣ

ಎಂದಿಗೂ ಮಾನವೀಯತೆಯನು

ಮರೆಯದಿರೋಣ


ಭಾರತೀಯನೆಂದು ಹೆಮ್ಮೆಯಿಂದ ಹೇಳೋಣ

ಎಲ್ಲೇ ಹೋದರು

ಭಾರತಿಯ ಗೌರವವ ರಕ್ಷಿಸೋಣ


ಕನ್ನಡನಾಡಿನ ಕುಡಿಯಾಗಿ ಮೆರೆಯೋಣ

ಎಂದೆಂದು ಭಕ್ತಿಯಿಂದ

ಕರುನಾಡ ತಾಯಿಯನು ಸ್ಮರಿಸೋಣ


ಕನ್ನಡ ನುಡಿದು ತಾಯಿಯನು ನಾವಾದರಿಸೋಣ

ಎಷ್ಟೇ ಹೊಸ ಭಾಷಗಳು ಕಲೆತರು

ಮಾತೃಭಾಷೆಯನು ಸದಾ ಜಪಿಸೋಣ


#ಪ್ರೀತಿಯ ಪುಸ್ತಕ

ಪುಟಗಳು ತುಂಬಿದ ತೋಟ

ನೀ ಹೌದು ಜ್ಞಾನದ ಸಂಪುಟ

ವಿಕಾಸಗೊಳಿಸುವೆ ವಿವೇಕ

ತೋರುವೆ ವಿಶ್ವದ ವಿನ್ಯಾಸ


ಗ್ರಂಥಾಲಯದಲಿ ಮುಖ್ಯಸ್ಥ

ವಿಶ್ವವಿದ್ಯಾಲಯದಲಿ ಶ್ರೇಷ್ಠ

ಶಾಲೆಯ ಮಕ್ಕಳಿಗೆ ಆಧಾರ

ವಿದ್ಯಾಭ್ಯಾಸಕೆ ಸ್ಥಿತ ಮೂಲ


ಶಾರದಾಂಬೆಯ ಪ್ರತಿರೂಪ

ವಂದಿಸುವೆ ದಿನ ದಿನ

ಬದಲಾದರೂ ನಿನ್ನ ರೂಪ

ಕೀರ್ತಿ ಎಂದಿಗೂ ಅಪಾರ


#ಪ್ರೀತಿಯ ಮಾವಿನ ಹಣ್ಣು

ಬಂಗಾರದ ಬಣ್ಣದಲಿ ಹೊಳೆಯುವೆ

ಸಿಹಿಯಾದ ರಸದಿಂ ತುಂಬಿರುವೆ

ಕೊಯ್ದರೆ ಪಟಪಟ ರಸ ಸುರಿಸುವೆ

ಚಪ್ಪರಿಸುವ ಇಚ್ಛೆ ಹೆಚ್ಚಿಸುವೆ


ಬೇಸಿಗೆಯಲಿ ಮರಮರದಲಿ

ತೂಗುತ್ತಲೆ ಆಕರ್ಷಿಸುವೆ

ತೋಟದಲಿ ಪರಿಮಳ ಬೀರುತ

ಗಿಳಿಗಳ ಆಹ್ವಾನಿಸುವೆ


ಗಂಭೀರವಾಗಿ ನೀ ಬೆಳೆದು

ಹಣ್ಣಿನ ರಾಜನೆಂದು ಪದವಿ ಪಡೆದೆ

ನಿನ್ನ ಸವಿರುಚಿಯ ಆಸ್ವಾದಿಸಲೆಂದೇ

ಗ್ರೀಷ್ಮವು ಬರುತ್ತೇನೋ ಅನಿಸುತ್ತದೆ!


#ಪ್ರೀತಿಯ ಹಸಿರು

ಕಣ್ಣಿಗೆ ತಂಪಾಗಿ

ಆತ್ಮಕೆ ಶಾಂತಿಯಾಗಿ

ನಿರ್ಮಲ ನೀನಾಗಿ

ಹರುಷವ ನೀ ತರುವೆ


ಊಟಕೆ ನೆರೆಯಾಗಿ

ಜೀವಿಗೆ ನೆಲೆಯಾಗಿ

ಚಿಚ್ಛಕ್ತಿಯ ಸಿರಿಯಾಗಿ

ಸ್ವರ್ಗವ ನೀ ತರುವೆ


ವರ್ಣದ ಛವಿಯಾಗಿ

ಪರ್ಣಗಳ ಆಕರ್ಷಣೆಯಾಗಿ

ಪೂರ್ಣ ಪಕೃತಿಯಾಗಿ

ಆವರಣವ ನೀ ತುಂಬೆದೆ


#ಪ್ರೀತಿಯ ಆಶ್ರಮ

ವಯಸಿಗೆ ಜ್ಞಾನಕ್ಕೆ ತಕ್ಕ ಸ್ಥರ

ಆಗುವೆ ನೀ ಎಲ್ಲರ ಆಸರ

ನಾಲಕ್ಕು ಮೆಟ್ಟಿಲ ನೀ ಏರಿಸಿ

ತೋರುವೆ ನೀ ಮೋಕ್ಷದ ಹಾದಿ


ಬಾಲ್ಯ ಯವ್ವನ ವನಪ್ರಸ್ಥಗಳಲಿ

ಅನುಭವಗಳ ತುಂಬಿಸಿ ಚಂದದಿ

ಪಕ್ವವ ಮಾಡುವೆ ಕೊನೆಯಲಿ

ಸನ್ಯಾಸದ ಬಳಿ ಕೊಂಡೊಯ್ಯುವೆ


ರಾಜರಾಜರು ಪ್ರವೇಶಿದರು ನಿನ್ನಲಿ

ಸ್ವೀಕರಿಸಿದ ತ್ಯಜಿಸಿದ ಕಥೆಗಳು ಕೇಳಿ

ಪುಣ್ಯಜನರನನುಸರಿಸಿ ಮುಕ್ತಿಯ

ಹೊಂದಲು ಸ್ಥಳವ ನೀ ನೀಡು!


#ಪ್ರೀತಿಯಲೇಖನಿ


ಪ್ರೀತಿಯ ಲೇಖನಿ

ಬರೆದಿಡುವೆ ಭಾವಗಳ

ತುಂಬಿದ ಮಸಿಯಿಂದ

ಬಣ್ಣ ಬಣ್ಣದ ಉತ್ಸಾಹ

ಬರಹಗಾರನ ಸಂಪದ


ಗಮ್ಮತ್ತು ನಿನ್ನ ಸಹಕಾರ

ಇಂದು ಪಡೆದೆವು ಗ್ರಂಥ

ಅಕ್ಷರಗಳ ಸುಂದರ ನೃತ್ಯ

ಜ್ಞಾನ ದರ್ಶನಕ್ಕೆ ಆಧಾರ


ಕಾಲದ ಜೊತೆ ನಿನ್ನ ರೂಪ

ಬದಲಾಗಿರುವ ಅನುಕೂಲ

ಕವಿ ಪಂಡಿತರಿಗೆ ನೀ ಬಲ

ಕೊಡುವೆ ಸದಾ ಬೆಂಬಲ


ಅಂದಿನಿಂದ ಇಂದಿನ ತನಕ

ಸಂಸ್ಕೃತಿ ಎಂದೆಂದು ಸುಸ್ಥಿರ

ದ್ರವ್ಯವನ್ನು ವರ್ಣ ಮಾಡುವ

ನಿನ್ನ ಶಕ್ತಿಗೆ ನಮೋನಮಃ


#ಪ್ರೀತಿಯ ಲಸಿಕೆ

ಹೆಮ್ಮಾರಿ ಭೀತಿಯನ್ನು

ಹೋಗಲಾಡಿಸುವ ಸಿರಿಯೇ

ಎಲ್ಲಿರುವೆ ನೀನೆಲ್ಲಿರುವೆ?


ಧೈರ್ಯವ ತುಂಬಲು

ಪ್ರಯೋಗಶಾಲೆಯಿಂದ

ದಂಡಿಯಾಗಿ ನೀ ಬರಬಾರದೇ?


ಬಂದಂತೇ ಬಂದು ನೀನು

ಹಾಗೇ ಖಾಲಿ ಆಗಿ

ಏಕೆ ನೀ ಸಾಲದೆ ಬರುವೆ?


#ಪ್ರೀತಿಯಮನೆ

ಅಮ್ಮನ ಮಡಿಲಂತೆ ಆಶ್ರಯ ನೀಡಿದೆ

ಅಪ್ಪನ ಬಲದಂತೆ ನೀ ರಕ್ಷಿಸಿದೆ

ಬೆಳೆದೆ ನಾನು ನಿನ್ನ ಹೃದಯದೊಳು

ಕಷ್ಟವಾದರು ಬಿಟ್ಟುಬಂದೆ!


ತವರು ಬಿಟ್ಟು ಬಂದ ನಾನು

ನಿನ್ನ ಒಲುಮೆ ಇಲ್ಲಿ ತಂದು

ಪ್ರೀತಿಯಂಬೋ ಬುನಾದಿಯ ಮೇಲೆ

ತವರಿನಂತ ಸ್ವರ್ಗ ನಿರ್ಮಿಸಿದೆ!


ನಿನ್ನ ಪ್ರೇರಣೆ ಕೊಂಡು ಬಂದೆ

ನನ್ನ ಛಾವಣೆಯಲಿ ಅದನ ತುಂಬಿದೆ

ತಾಯಿಗೆ ತಕ್ಕ ಕಂದನಂತೆ

ಅದೇ ದೇವಸ್ಥಾನದ ಛಾಯೆ ಇಲ್ಲಿ ನೆಲಿಸಿದೆ!

28 views0 comments

Recent Posts

See All