ಪಲ್ಲವಿ-
ಅಂಬೆಗಾಲಿಕ್ಕುತ ಮುದ್ದು ಕೃಷ್ಣಬಂದ ನೋಡೆ
ಅತ್ತ ಇತ್ತ ನೋಡುತ ಸರಿದಾಡುವ ಕೃಷ್ಣನ ನೋಡೆ
ಅನುಪಲ್ಲವಿ-
ಬೆಣ್ಣೆಯ ಕದಿಯುವ ತುಂಟ ಕೃಷ್ಣನ ನೋಡುತ
ಗೋಪಿಯರು ಮೈಮರೆವುದನು ನೀ ನೋಡೆ
ಚರಣ-
ಕಲ್ಲನು ಹೊಡೆದು ಗಡಿಗೆಯು ಒಡೆದು ಮೆಲ್ಲನೆ ಓಡಿದ
ಜಗದೋದ್ಧಾರಕನ ಅಪ್ರಮೇಯನ ಚಲುವನು ಮನಸಾರಾ ನೋಡೇ
।।ಅಂಬೆಗಾಲಿಕ್ಕುತ।।
ಗೋಕುಲ ಸ್ತ್ರೀಯರು ಕೃಷ್ಣನ ತೋರುತ
ನಿನ್ನ ಕಂದನ ಲೀಲೆಗಳು ನೋಡಮ್ಮ ಯಶೋದೆಯಂದು ಪೇಳಿದನು ನೀ ನೋಡೇ
।।ಅಂಬೆಗಾಲಿಕ್ಕುತ।।
ತುಂಟತನಕೆ ಬೈದ ತಾಯಿಯ ಕೆನ್ನೆಯ ಪಿಡಿದು
ಮುಂದೆ ಮಾಡೆನು ಮಾಡೆನು ಅಮ್ಮ ಎಂಬ ಕೃಷ್ಣನ ಮುಗ್ಧತೆಯ ನೀ ನೋಡೇ
।।ಅಂಬೆಗಾಲಿಕ್ಕುತ।।
ಇಟ್ಟ ಬೆಣ್ಣೆ ಇಟ್ಟಲ್ಲೇ ಉಂಟು ಅಮ್ಮನಿಗೆ ಹೇಳೆವು ನಾವು
ನೀ ತಿನ್ನದ ಬೆಣ್ಣೆ ರುಚಿ ಇಲ್ಲವೆಂದು ಗೋಳಾಡಿದ ಗೋಪಿಕೆಯರ ಕಷ್ಟವ ನೀ ನೋಡೇ
।।ಅಂಬೆಗಾಲಿಕ್ಕುತ।।
ಪಾಪವ ಕಳೆಯಲು ಮನೆಮನೆಬೆಣ್ಣೆ ತಿಂದ ಗೋಪಾಲನ ರೂಪಕೆ
ಪ್ರೀತಿಯಿಂದ ವಂದಿಸಿದ ಗೋಪೆಮ್ಮಗಳ ಆದರಭಕುತಿಯ ನೀ ನೇಡೇ
।।ಅಂಬೆಗಾಲಿಕ್ಕುತ।।
#ಕೃಷ್ಣ
Comentarios