top of page

ಗಣೇಶನ ಹಾಡು



#ಗಣೇಶ

ವಿಘ್ನಗಳನಳಿಸಲು ಮೂಷಕವನೇರಿ ಬಂದ ನಮ್ಮ ಗಣಪ್ಪ

ಚವಿತಿಯಂದು ಎಲ್ಲೆಲೂ ತಾನಾಗಿ ಮೆರೆದನು ನಮ್ಮ ಗಣಪ್ಪ

॥ವಿಜ್ಞಗಳನಳಿಸಲು॥

ಭಕ್ತರ ಭಕ್ತಿಗೆ ಮೆಚ್ಚಿ ಬೇಡಿದ ವರಗಳು ಕೊಡುವ ಅಪ್ಪನೇ ಈತ

ನಂಬಿದ ಜನರಿಗೆ ಭಾಗ್ಯಗಳನ್ನು ಸಿಧ್ಧಿಸುವ ಸಿದ್ಧಿವಿನಾಯಕನು ಸನ್ನುತ

ಚತುರ್ಥಿಯಂದು ಪೂಜೆಗಳನು ಸ್ವೀಕರಿಸಲು ಕೈಲಾಸದಿಂದ ಬಂದು ನಿಂತ

ಭೂಲೋಕದಲಿ ರಾಜೋಪಚಾರಗಳಿಗೆ ಮೋದಿಸಿದ ಏಕದಂತ ಗೌರೀಸುತ

॥ವಿಜ್ಞಗಳನಳಿಸಲು॥

ಅಗ್ರಗಣ್ಯನೇ ನಿನ್ನ ನೆನೆದರೆ ಸಾಕು ಲೋಕದಲಿ ಸರ್ವಕಷ್ಟಗಳ ನಿವಾರಣೆ

ಪಾಪಗಳ ಕಳೆಯುವ ನಿನ್ನ ಕರುಣಾಕಟಾಕ್ಷವೇ ನಮ್ಮ ಬಾಳಿಗೆ ಪುಣ್ಯದ ಹೆಣೆ

ಸಿದ್ಧಿಬುದ್ಧಿಯರೊಂದಿಗೆ ದರ್ಶನ ಭಾಗ್ಯವನೀಯುವ ಆದಿಪೂಜಕನೆ ನಿನಗೆ ವಂದನೆ

ಶ್ರೇಷ್ಠವಾದ ನಿನ್ನ ಪಾದಾಂಬುಜಗಳನು ನಮ್ಮ ಮನೆಯಲಿಡೆಂದೆಮ್ಮ ಪ್ರಾರ್ಥನೆ

॥ವಿಜ್ಞಗಳನಳಿಸಲು॥

ಬೇಡಿದೆವು ಜ್ಞಾನವ ಸಕಲ ವಿದ್ಯಾ ಬುದ್ದಿಗಳನನುಗ್ರಹಿಸುವ ತಂದೆಯನ್ನು

ಕೋರಿದೆವು ಪ್ರಜ್ಞೆಯನು ಭಾಗವತವ ಬರೆದ ಜ್ಞಾನದೀಪವನ್ನು

ಮನಃ ಪೂರ್ವಕದಿಂ ನಮಿಸಿದೆವು ಶುಭಯೋಗವು ತರುವ ಶುಭದನನ್ನು

ಷೋಡಶೋಪಚಾರಗಳನ್ನರ್ಪಿಸಿ ಕೈಮುಗಿದೆವು ಸುಜ್ಞಾನರೂಪನನ್ನು

॥ವಿಜ್ಞಗಳನಳಿಸಲು॥

6 views0 comments

Recent Posts

See All
Post: Blog2_Post
bottom of page